ಕೋವಿಡ್ ಗೆ ನಿನ್ನೆ ತಮ್ಮ ಇಂದು ಅಕ್ಕ ಬಲಿ

ಬಳ್ಳಾರಿ, ಮೇ.29: ಹೊಸಪೇಟೆ ನಗರದ ಬಹುಮುಖ ಪ್ರತಿಭೆ, ಹೋರಾಟಗಾರ್ತಿ, ಸಮಾಜ ಸೇವಕಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮೀತ್ ಇಂದು ಕೋವಿಡ್ ಗೆ ಬಲಿಯಾಗಿದ್ದಾರೆ.
ಅವರಿಗೆ 45 ವರ್ಷದ ವಯಸ್ಸಾಗಿತ್ತು. ನಿನ್ನೆ ಅವರ ತಮ್ಮ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದ. ಕೋವಿಡ್ ಪಾಸಿಟಿವ್ ಇದ್ದ ಅವರಬ್ನು ಸಹ ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿತ್ತು. ಅವರು ಸಹ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
ಕೋರೋನಾ ಮಹಾ ಮಾರಿ ಬಂದು ಲಾಕ್ ಡೌನ್ ಆಗಿ ತೊಂದರೆಯಲ್ಲಿದ್ದಾಗ ಬಡ ಜನರಿಗೆ ಸಹಾಯ ಮಾಡಲು ರೇಷನ್ ಕಿಟ್ಟ್, ತರಕಾರಿ, ಹಣಕಾಸಿನ ನೆರವು,ಮಹಿಳಾ ಸಭಲೀಕರಣ, ತೊಂದರೆಯಲ್ಲಿದ್ದ ಸಾವಿರಾರು ಜನರಿಗೆ ಸಹಾಯ ಮಾಡುತ್ತಾ ಸಮಾಜ ಸೇವೆ ಮಾಡಿದ್ದನ್ನು‌ ಮರೆಯುವಂತಿಲ್ಲ.