ಕೋವಿಡ್ ಗೆ ತಾ.ಪಂ.ಮಾಜಿ ಸದಸ್ಯ ಬಲಿ.

ಕೂಡ್ಲಿಗಿ.ನ.3:-ತಾಲೂಕಿನ ಅಪ್ಪೇನಹಳ್ಳಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ದೇವರಹಟ್ಟಿಯ ಮಲ್ಲಿಕಾರ್ಜುನ ನಸುಕಿನ ಜಾವ ಮಹಾಮಾರಿ ಕೋವಿಡ್ ಗೆ ಬಲಿಯಾಗಿದ್ದರೆಂದು ತಿಳಿದಿದೆ. ಮೈಯಲ್ಲಿ ಹುಷಾರಿಲ್ಲವೆಂದು ಆಸ್ಪತ್ರೆಗೆ ದಾಖಲಿಸಲಾಗಿ ಕೋವಿಡ್ ಟೆಸ್ಟ್ ಮಾಡಿಸಲಾಗಿ ಪಾಸಿಟಿವ್ ವರದಿ ಬಂದಿದ್ದು ಆಸ್ಪತ್ರೇಲಿ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಮಲ್ಲಿಕಾರ್ಜುನ ಕೋವಿಡ್ ಮಹಾಮಾರಿಗೆ ಇಂದು ನಸುಕಿನ ಜಾವ ಬಳ್ಳಾರಿ ಆಸ್ಪತ್ರೇಲಿ ಬಲಿಯಾಗಿದ್ದು ಇಂದು ಬೆಳಿಗ್ಗೆ ಅವರ ಸ್ವಗ್ರಾಮಕ್ಕೆ ಅವರ ಮೃತದೇಹ ತಂದಿದ್ದು ಮದ್ಯಾಹ್ನ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ಅವರ ಆಪ್ತ ವಲಯದಿಂದ ತಿಳಿದಿದೆ.