ಕೋವಿಡ್ ಕೇರ ಸೆಂಟರ್‍ಗೆ ಸಚಿವರ ಭೇಟಿ

ಧಾರವಾಡ ಮೇ.30: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಚಿವರಾದ ಜಗದೀಶ ಶೆಟ್ಟರ, ಶಾಸಕ ಅಮೃತ ದೇಸಾಯಿಯವರು ಅಧಿಕಾರಿಗಳೊಂದಿಗೆ ಧಾರವಾಡದ ಗರಗ ರಸ್ತೆಯ ಸಿ ಬಿ ಗುತ್ತಲ ಆಯುರ್ವೇದಿಕ ಕಾಲೇಜ ಕೋವಿಡ ಸೆಂಟರಗೆ ಭೇಟಿ ನೀಡಿ ವ್ಯವಸ್ಥೆ ವೀಕ್ಷಿಸಿ ಸಲಹೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ನಿತೀಶ ಪಾಟೀಲ ಅವರು ನೂತನ ಕೋವಿಡಕೇರ ಸೆಂಟರಗೆ ಐದು ಆಕ್ಸಿಜನ್ ಕಾನ್ಸಂಟ್ರೇಟರ ಹಸ್ತಾಂತರಿಸಿದರು.ಅಲ್ಲಿ ದೊರಕುವ ಆಹಾರ ಗುಣಮಟ್ಟವನ್ನು ಪರಿಶೀಲಿಸಿ ಅತ್ಯುತ್ತಮ ವ್ಯವಸ್ಥೆ ಮಾಡಿರುವ ಸಿಬ್ಬಂದಿ ವರ್ಗಕ್ಕೆ ಗಣ್ಯರು ಅಭಿನಂದಿಸಿ ಅಲ್ಲಿ ನೀಡುವ ಚಿಕಿತ್ಸೆ ಬಗ್ಗೆ ಹಾಗೂ ದಾಖಲಾದ ರೋಗಿಗಳ ಸಂಬಂಧಿಕರೊಂದಿಗೆ ವಿಸ್ತೃತವಾಗಿ ಚರ್ಚಿಸಿ ನೊಂದ ಮನಗಳಿಗೆ ಸಾಂತ್ವನ ನೀಡಿದರು

ಈ ಸಂದರ್ಭದಲ್ಲಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ,ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರು ಈರೇಶ ಅಂಚಟಗೇರಿ, ತಹಶೀಲ್ದಾರ ಸಂತೋಷ ಬಿರಾದಾರ, ಕ್ಷೇತ್ರ ಆರೋಗ್ಯಾಧಿಕಾರಿ ಯಶವಂತ ಮದೀನಕರ ,ಪ್ರಾಂಶುಪಾಲರು ಶಶಿಧರ ಹೊಂಬಳ, ಡಾ ರಾಧಾಕೃಷ್ಣನ್ ತವನಪ್ಪ ಅಷ್ಟಗಿ ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.