ಕೋವಿಡ್ ಕೇರ್ ಸೆಂಟರ್ ಸ್ಯಾನಿಟೈಸ್ ಮಾಡಿದ ಶಾಸಕರು

ಹೊನ್ನಾಳಿ.ಜೂ.೧೧: ಇಡೀ ದೇಶವೇ ಕೊರೊನಾದಿಂದ ಮುಕ್ತವಾಗಬೇಕೆಂಬ ಉದ್ದೇಶದಿಂದ ತಾಲೂಕಿನ ಅರಬಗಟ್ಟೆಯಲ್ಲಿರುವ ಆರೈಕೆ ಕೇಂದ್ರದಲ್ಲಿ ಮೃತ್ಯುಂಜಯ್ಯ ಹೋಮ ಹಾಗೂ ಧನ್ವಂತರಿ ಹೋಮ ಹಮ್ಮಿಕೊಳ್ಳಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಬೆಳ್ಳಂಬೆಳ್ಳಿಗೆ ಸ್ಯಾನಿಟೈಸ್ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.ಕೊರೊನಾವೆಂಬ ಚಿಕ್ಕ ವೈರಸ್ ಸಾಕಷ್ಟು ಸಾವು ನೋವು ಉಂಟು ಮಾಡಿದ್ದುಕೊರೊನಾ ರೋಗದಿಂದ ಮುಕ್ತವಾಗ ಬೇಕು ಜೊತೆಗೆ ಲೋಕಕ್ಕೆ ಒಳಿತಾಂಗ ಬೇಕಂಬ ಉದ್ದೇಶದಿಂದ ಮೃತ್ಯುಂಜಯ್ಯ ಹೋಮ ಹಾಗೂ ಧನ್ವಂತರಿ ಹೋಮ ಹಮ್ಮಿಕೊಳ್ಳಲಾಗಿದೆ ಎಂದರು.ಆರೈಕೆ ಕೇಂದ್ರದಲ್ಲಿನ ಸೋಂಕಿತರ ಆರೋಗ್ಯ ವೃದ್ದಿ ಸೇರಿದಂತೆ ಲೋಕಕ್ಕೆ ಸನ್ಮಂಗಳ ಉಂಟು ಮಾಡಿ, ಇಡೀ ವಿಶ್ವವೇ ಕೊರೊನಾದಿಂದ ಮುಕ್ತವಾಗ ಬೇಕೆಂದು ಈ ಹೋಮ ಹಮ್ಮಿಕೊಂಡಿರುವುದಾಗಿ ರೇಣುಕಾಚಾರ್ಯ ತಿಳಿಸಿದರು.ಕೋವಿಡ್ ಕೇಂದ್ರ ಸ್ಯಾನಿಟೈಸರ್ : ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿಂದು ಬೆಳ್ಳಂಬೆಳ್ಳಿಗೆ ಸ್ಯಾನಿಟೈಸ್ ಮಾಡಿದ ಶಾಸಕರು ಖುದ್ದು ನಾಜಲ್ ಹಿಡಿದು ಕೋವಿಡ್ ಕೇರ್ ಸೆಂಟರ್ ಸ್ಯಾನಿಟೈಸ್ ಮಾಡಿದರು. ಆರೈಕೆ ಕೇಂದ್ರದಲ್ಲಿರುವವರು ತಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಕೊಠಡಿಗಳನ್ನು ತಾವೇ ಶುಚಿಗೊಳಿಸಿಗೊಳಿಸುವಂತೆ ತಿಳಿ ಹೇಳಿದರು. ನಾನಗೆ ಕೊರೊನಾ ಬಂದ ಸಂದರ್ಭದಲ್ಲಿ ನನ್ನ ಕೊಠಡಿಯನ್ನು ನಾನೇ ಕ್ಲಿನ್ ಮಾಡಿಕೊಳ್ಳುತ್ತಿದ್ದು, ನೀವು ಕೂಡ ಅದನ್ನು ಮೈಗೂಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಯೋಗಾಬ್ಯಾಸ : ಆರೈಕೆ ಕೇಂದ್ರದಲ್ಲಿನ ಸೋಂಕಿತರಿಗೆ ಆತ್ಮಸ್ಥೆöÊಯ ಮೂಡಿಸುವ ದೃಷ್ಟಿಯಿಂದ ಪ್ರತಿನಿತ್ಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಪ್ರತಿನಿತ್ಯ ಯೋಗಾಬ್ಯಾಸವನ್ನು ರೇಣುಕಾಚಾರ್ಯ ಮಾಡುತ್ತಿದ್ದು ಅವರೊಂದಿಗೆ ಪ್ರತಿನಿತ್ಯ ಯೋಗಾಬ್ಯಾಸ ಮಾಡುತ್ತಿದ್ದಾರೆ. ಯೋಗಾಬ್ಯಾಸ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದ್ದು ಪ್ರತಿಯೊಬ್ಬರೂ ಕೂಡ ಯೋಗವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಸೂಚಿಸಿದರು.ಕೋವಿಡ್ ಕೇರ್ ಸೆಂಟರ್‌ನಲ್ಲೇ ವಾಸ್ತವ್ಯ : ಕಳೆದ ಆರು ದಿನಗಳಿಂದಲೂ ಕೋವಿಡ್ ಕೇರ್ ಸೆಂಟರ್‌ನಲ್ಲಿ ವಾಸ್ತವ್ಯ ಮಾಡುತ್ತಿರುವ ರೇಣುಕಾಚಾರ್ಯ ಪ್ರತಿನಿತ್ಯ ಸೋಂಕಿತರ ಯೋಗಕ್ಷೇಮ ವಿಚಾರಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಅವರಿಗೆ ಉಪಹಾರ ಬಡಿಸಿ ಅವರೊಂದಿಗೆ ಉಪಹಾರ ಸೇವನೆ ಮಾಡುತ್ತಿರುವ ರೇಣುಕಾಚಾರ್ಯ ಕೊರೊನಾ ಸೋಂಕಿತರು ಗುಣಮುಖರಾಗಿ ಹೋಗುವವರೆಗೂ ಕೋವಿಡ್ ಕೇರ್ ಸೆಂಟರ್‌ನಲ್ಲಿ ವಾಸ್ತವ್ಯ ಮಾಡುವುದಾಗಿ ತಿಳಿಸಿದ್ದಾರೆ.