ಕೋವಿಡ್ ಕೇರ್ ಸೆಂಟರ್ ವೈದ್ಯರನ್ನು ಸನ್ಮಾನಿಸಿದ ಸೋಂಕಿತರು!

ಚಾಮರಾಜನಗರ, ಜೂ. 9- ತಾಲೂಕಿನ ಸಂತೇಮರಹಳ್ಳಿಯ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ವೈದ್ಯರು ಯಾವುದೇ ಭೇಧಭಾವ ಮಾಡದೇ ಪ್ರೀತಿ ವಿಶ್ವಾಸದಿಂದ ನಮಗೆ ಉತ್ತಮ ಚಿಕಿತ್ಸೆ, ಊಟದ ವ್ಯವಸ್ಥೆ ಮಾಡುವ ಮೂಲಕ ಉತ್ತಮ ಸೇವೆ ನೀಡಿದ್ದಾರೆ ಎಂದು ಸೆಂಟರ್‍ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕರೋನಾ ಸೋಂಕಿತರು ಅಲ್ಲಿನ ವೈದ್ಯರನ್ನು ಸನ್ಮಾನಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್‍ನ ಡಾ. ಚನ್ನಬಸಪ್ಪ, ಡಾ. ಚಿರಾಗ್‍ರೆಡ್ಡಿ, ಎಂ.ಎಲ್.ಎಚ್.ಪಿ.ಗಳಾದ ಇ. ಹರ್ಷಿತ್, ಸಿಬ್ಬಂದಿಗಳಾದ ಮಹೇಶ್, ನಂಜುಂಡಯ್ಯ, ಶೇಖರ್, ಆಂಬ್ಯುಲೆನ್ಸ್ ಚಾಲಕ ನಂದೀಶ್ ಅವರನ್ನು ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಆಲೂರು ಬಿರ್ಲಾ ನಾಗರಾಜು, ಹೊಮ್ಮದ ಅಶ್ವಥ್ ಇತರರು ಸನ್ಮಾನಿಸಿದರು.
ಅಸ್ಪೃಶ್ಯತೆಯಿಂದ ನೋಡಬೇಡಿ :
ಕರೋನಾದಿಂದ ಇಡೀವಿಶ್ವವೇ ತತ್ತರಿಸಿ ಹೋಗಿದ್ದು, ಅನೇಕ ಸಾವುಗಳು ಸಂಭವಿಸಿದೆ. ಕರೋನಾ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಆಕಸ್ಮಿಕವಾಗಿ ಯಾರಿಗಾದರೂ ಕರೋನಾ ಬರಬಹುದು, ಆದ್ದರಿಂದ ಹಳ್ಳಿಗಳಲ್ಲಿ ಕರೋನಾ ಸೋಂಕಿತರನ್ನು ಅಸ್ಪೃಶ್ಯತೆ, ಅನುಮಾನ, ಅಪಮಾನ ಭಾವನೆಯಿಂದ ಕಾಣದೆ ದೂರದಿಂದಲ್ಲಾದರೂ ಕೂಡ ಪ್ರೀತಿ, ವಿಶ್ವಾಸದಿಂದ ಮಾಸ್ಕ್ ಧರಿಸಿ, ಸುರಕ್ಷತ ಕ್ರಮಗಳ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಸೆಂಟರ್‍ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಬಿರ್ಲಾ ನಾಗರಾಜು ತಮ್ಮ ಅಭಿಪ್ರಾಯವನ್ನು ಈ ಮೂಲಕ ತಿಳಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್‍ಗೆ ಬರಲು ಹೆದರಿಬೇಡಿ:
ಕೋವಿಡ್ ಕೇರ್ ಸೆಂಟರ್‍ನಲ್ಲಿ ಎಲ್ಲ ಸೌಲಭ್ಯಗಳಿದ್ದು ವೈದ್ಯರು ಉತ್ತಮ ರೀತಿಯಲ್ಲಿ ನೋಡಿಕೊಳ್ಳತ್ತಾರೆ. ಉತ್ತಮ ಚಿಕಿತ್ಸೆ, ಊಟದ ವ್ಯವಸ್ಥೆ ಜತೆಗೆ ಕ್ರೀಡಾ ಚಟುವಟಿಕೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಸುವ ಮೂಲಕ ದೈಹಿಕ, ಮಾನಸಿಕ ಸ್ಥೈರ್ಯ ತುಂಬುತ್ತಿದ್ದಾರೆ. ಕರೋನಾ ಸೋಂಕಿತರು ಧೈರ್ಯದಿಂದ ಕೋವಿಡ್ ಕೇರ್ ಸೆಂಟರ್ ಬರುವಂತೆ ನಾಗರಾಜು ಮಾನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ವೈದ್ಯರಾದ ಡಾ. ಚಿರಾಗ್‍ರೆಡ್ಡಿ, ಡಾ. ಚೆನ್ನಬಸಪ್ಪ ಮಾತನಾಡಿ, ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ ಅಷ್ಟೆ. ನಿಜ ಹೇಳಬೇಕೆಂದರೆ ಇಲ್ಲಿ ನಿಮ್ಮಂತಹ ರೋಗಿಗಳನ್ನು ಪಡೆದಿರುವುದೇ ನಮ್ಮ ಪುಣ್ಯ ಎಲ್ಲರೂ ಬೇಗ ಗುಣಮುಖರಾಗಲಿ ಎಂದು ಆಶಿಸಿದರು.ಕೋವಿಡ್ ಕೇರ್ ಸೆಂಟರ್ ವೈದ್ಯರನ್ನು ಸನ್ಮಾನಿಸಿದ ಸೋಂಕಿತರು!