ಕೋವಿಡ್ ಕೇರ್ ಸೆಂಟರ್ ನಲ್ಲಿ ಶಾಸಕರ ವಾಸ್ತವ್ಯ

ಹೊನ್ನಾಳಿ. ಜೂ.೫; ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ  ವಾಸ್ತವ್ಯ ಮಾಡಿ.ಕೊವಿಡ್ ಕೇರ್ ಸೆಂಟರ್ ನ ವ್ಯವಸ್ಥೆ ಪರಿಶೀಲಿಸಿದ್ದಾರೆ.ಮೂರು ದಿನಗಳ ಕಾಲ ಕೋವಿಡ್ ಸೋಂಕಿತರೊಂದಿಗೆ  ವಾಸ್ತವ್ಯ ಮಾಡಿ, ಪ್ರತಿದಿನ ಬೆಳಗ್ಗೆ ಯೋಗಾಭ್ಯಾಸ ಸಂಜೆ ಸಂಗೀತ ಕಾರ್ಯಕ್ರಮ ಆಯೋಜಿಸುವ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು.