ಕೋವಿಡ್ ಕೇರ್ ಸೆಂಟರ್ ಜೋಶಿ ಚಾಲನೆ

ಕೋಲಾರ,ಮೇ.೨೦:ಬಿ.ಜಿ.ಎಂ.ಎಲ್. ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಬೇಕಾಗುವ ೧೦೦೦ ಲೀ. ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಕಾನ್ಸನ್‌ಟ್ರೇಟರ್, ಮೆಡಿಸನ್ ಮತ್ತಿತರ ವೈದ್ಯಕೀಯ ಸಲಕರಣೆಗಳನ್ನು ನೀಡುವುದಾಗಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು.
ಕೆ.ಜಿ.ಎಫ್ ನ ಬಿ.ಜಿ.ಎಂ.ಎಲ್ ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆಯನ್ನು ವರ್ಚುವಲ್ ಪ್ಲ್ಯಾಟ್‌ಫಾರಂ ಮುಖಾಂತರ ಉದ್ಘಾಟಿಸಿದ ಅವರು, ಕೋವಿಡ್ ಸಾಂಕ್ರಾಮಿಕ ರೋಗದ ಅಲೆ ಮುಗಿದ ನಂತರವೂ ಈ ಆಸ್ಪತ್ರೆ ಕಾರ್ಯನಿರ್ವಹಿಸಲಿ ಎಂದು ಸಲಹೆ
ನೀಡಿದರು.ವರ್ಚುಯಲ್ ಉದ್ಘಾಟನೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ ನಾರಾಯಣ್ ಮತ್ತು ಆರೋಗ್ಯ ಸಚಿವರಾದ ಡಾ.ಸುಧಾಕರ್ ರವರು ಪಾಲ್ಗೊಂಡಿದ್ದರು. ಬಿ.ಜಿ.ಎಂ.ಎಲ್. ಆಸ್ಪತ್ರೆಯಿಂದ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿಗಳಾದ ಡಾ. ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್, ಕೆ.ಜಿ.ಎಫ್ ತಹಶೀಲ್ದಾರ್
ಸುಜಾತ, ಡಿ.ವೈ.ಎಸ್.ಪಿ ಉಮೇಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.