ಕೋವಿಡ್ ಕೇರ್ ಸೆಂಟರ್ ಚಾಲನೆ

ಕೊಪ್ಪಳ ಜೂನ್ 4: ತಾಲ್ಲೂಕಿನ ಅಳವಂಡಿ ಕೋವಿಡ್ ಕೇರ್ ಸೆಂಟರ್‌ಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ
ಭೇಟಿ ನೀಡಿ ಪರಿಶೀಲಿಸಿದರು. ಕೊಪ್ಪಳ ತಾಲೂಕು ವ್ಯಾಪ್ತಿಯ ಅಳವಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್.ಎಂ.ಎಸ್.ಎ ಬಾಲಕಿಯರ ವಸತಿ ಶಾಲೆಯಲ್ಲಿ ಕೋವಿಡ್
ಕೇರ್ ಸೆಂಟರ್‌ನ್ನು ಪ್ರಾರಂಭ ಮಾಡಲಾಗಿದ್ದು, ಅದರಲ್ಲಿ ಸುಮಾರು ೩೦ ಜನ ಕೋವಿಡ್ ಸೋಂಕಿತರು ದಾಖಲಾಗಿರುತ್ತಾರೆ. ಈ ಕೋವಿಡ್ ಕೇರ್
ಸೆಂಟರ್‌ಗೆ ಸಂಜೀವಿನಿ-ಎನ್‌ಆರ್‌ಎಲ್‌ಎ ಯೋಜನೆಯ ಅಳವಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಬಾಂಧವ್ಯ ಸಂಜೀವಿನಿ ಗ್ರಾಮ ಕಷಾಯ, ಮಧ್ಯಾಹ್ನ ಮತ್ತು ರಾತ್ರಿ ಊಟ) ಅನ್ನ ಸಂತರ್ಪಣೆಯನ್ನು ಮಾಡಲು ಇತ್ತೀಚೆಗೆ (ಮೇ ೩೧) ಆರ್.ಎಂ.ಎಸ್.ಎ ಬಾಲಕಿಯರ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ಗೆ ಒಕ್ಕೂಟದ ಸದಸ್ಯರು ಭೇಟಿ ನೀಡಿ
ಕೋವಿಡ್‌ಗೆ ತುತ್ತಾದವರಿಗೆ ಉಚಿತ ಅನ್ನ ಸಂತರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಮಲ್ಲಪ್ಪ
ಬೇಣಕಲ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ರುದ್ರಯ್ಯ ಹಿರೇಮಠ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಅಂಬಣ್ಣ ಕಟಗಿ, ಜಿಲ್ಲಾ ವ್ಯವಸ್ಥಾಪಕರಾದ ಡಿ ವೆಂಕೋಬ, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಸುನಿಲ್ ಹೆಚ್.ಕೆ,
ವಲಯ ಮೇಲ್ವಿಚಾರಕ ವೆಂಕಪ್ಪ ಶೀಗನಹಳ್ಳಿ, ಶ್ರೀ ಬಾಂಧವ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಅಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ಪ್ರತಿಭಾ ಕಲ್ಗುಡಿ, ಖಜಾಂಚಿ ಅನ್ನಪೂರ್ಣ ಜಂತ್ಲಿ, ಒಕ್ಕೂಟದ ಇತರೆ ಸದಸ್ಯರು ಮತ್ತು ಪುಸ್ತಕ ಬರಹಗಾರ ಮಲ್ಲಮ್ಮ ಬೇವಿನಕಟ್ಟಿ, ಎಲ್.ಸಿ.ಆರ್.ಪಿ ಗೀತಾ ಕಿಲ್ಲೇದ್, ಪ್ರತಿಭಾ ಬಣ್ಣದ್, ಕಾಳಮ್ಮ ಹಾಗೂ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.