ಕೋವಿಡ್ ಕೇರ್ ಸೆಂಟರ್ ಗೆ 45 ಹಬೆ ಯಂತ್ರಗಳ ವಿತರಣೆ

ಹಿರಿಯೂರು.ಜೂ.5-ಅಖಿಲ ಭಾರತ ವೀರಶೈವ ಮಹಾಸಭೆ ಹಿರಿಯೂರು ಇವರು ನಡೆಸುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ, ಬಿ ಎನ್ ತಿಪ್ಪೇಸ್ವಾಮಿ ಹಿರಿಯ ವಕೀಲರು ಬಬ್ಬೂರು, ಅಧ್ಯಕ್ಷರು ಗಿರೀಶ ವೀರಶೈವ ವಿದ್ಯಾವರ್ಧಕ ಸಂಘ, ಇವರು  45 ಹಬೆ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದು, ಇವರ ಮಗನಾದ ಬಿ ಎನ್ ಸಂತೋಷ್ ರವರು 45 ಯಂತ್ರಗಳನ್ನು ಹಸ್ತಾಂತರಿಸಿದ್ದಾರೆ ಈ ಸಂದರ್ಭದಲ್ಲಿ ಮಹಾಸಭೆಯ ಅಧ್ಯಕ್ಷರಾದ ಜಿಪಿ ಯಶವಂತ ರಾಜ್, ಪ್ರಧಾನ ಕಾರ್ಯದರ್ಶಿ ಸಿಎಂ ಸ್ವಾಮಿ ಮಹಾಸಭೆಯ ಯುವ ಘಟಕದ ಅಧ್ಯಕ್ಷರಾದ ವಿ ಅರುಣ ಕುಮಾರ್,ಮಲಿಕ್ ಸಾಬ್ ಮಾಜಿ ಸೈನಿಕರು ಎಸ್.ಎಂ ಜಗದೀಶ್ ಉಪಸ್ಥಿತರಿದ್ದರು.