ಕೋವಿಡ್ ಕೇರ್ ಸೆಂಟರ್ ಗೆ, 25 ಸಾವಿರ ಮೊಟ್ಟೆ ವಿತರಣೆಗೆ ಕ್ರಮ

ಹಗರಿಬೊಮ್ಮನಹಳ್ಳಿ :-ಜೂ.೦೩ ಕೊರೋನ ಸೋಂಕಿತರಲ್ಲಿ ಪೌಷ್ಟಿಕಾಂಶ ಬೆಳವಣಿಗೆಗೆ ನಿತ್ಯ ಮೊಟ್ಟೆ ನೀಡುವ ಮೂಲಕ ಅವರ ರೋಗನಿರೋಧಕ ಶಕ್ತಿ ವೃದ್ಧಿಸುವ ಸಲುವಾಗಿ ವೈಯಕ್ತಿಕ ವಾಗಿ ಎರಡು ತಿಂಗಳು ಮಟ್ಟಿಗೆ 25000 ಮೊಟ್ಟೆ ವಿತರಿಸಲಾಗುವುದು ಎಂದು ಶಾಸಕ ಭೀಮಾನಾಯ್ಕ್ ಹೇಳಿದರು .
ತಾಲೂಕಿನ ವರಲಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ನೂರು ಬೆಡ್ ಗಳ ಕೋವಿಡ್-19 ಕೇರ್ ಸೆಂಟರ್ ಗೆ ಬುದುವಾರ ತೆರಳಿ ಆಹಾರದ ಗುಣಮಟ್ಟ ಪರಿಶೀಲಿಸಿದ ಶಾಸಕರು ಮಾತನಾಡಿ ಕರೋಣ ಎಂಬ ಮಾರಿ ಜನರ ಜೊತೆಗೆ ಆಟ ಆಡುತ್ತಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಜನರು ಇದರಿಂದ ಜಾಗೃತರಾಗಿರಬೇಕು ಎಂದರು ಕ್ಯಾರಂಟೈನ್ ನಲ್ಲಿ ಇರುವ ಹಾಗೂ ಕೋವಿಡ್ ಕೇರ್ ಸೋಂಕಿತರಿಗೆ ಆತ್ಮಸ್ರ್ಥೈಯ ತುಂಬುವುದರ ಜೊತೆಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಶರಣಮ್ಮ ಟಿಎಚ್ಒ ಶಿವರಾಜ್, ಮುಖಂಡರಾದ ಅಕ್ಕಿ ತೋಟೇಶ್ ಪವಾಡಿ ಹನುಮಂತ ಇತರರು ಇದ್ದರು