ಕೋವಿಡ್ ಕೇರ್ ಸೆಂಟರ್ ಗೆ ತಹಶೀಲ್ದಾರ್ ತಂಡ ಭೇಟಿ

ಜಗಳೂರು.ಮೇ.೫:  ತಾಲೂಕಿನ  ಶಾಸಕರಾದ ಎಸ್. ವಿ ರಾಮಚಂದ್ರ ಸೂಚನೆಯಂತೆ ಮೆದಗಿನಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಸೋಂಕಿತರಿಗೆ ತೆರೆದಿರುವ ಕೋವಿಡ್ ಕೇರ್ ಸೆಂಟರಿಗೆ ರಾತ್ರಿ ತಾಲೂಕು ದಂಡಾಧಿಕಾರಿ ಡಾ.ನಾಗವೇಣಿ ಮತ್ತು ಕೋವಿಡ್ ಕೇರ್ ಸೆಂಟರ್ ನ ಸಹಾಯಕ ನೋಡಲ್ ಅಧಿಕಾರಿ ಬಿ.ಮಹೇಶ್ವರಪ್ಪ  ಭೇಟಿ ನೀಡಿದರು ನಂತರ ಮಾತನಾಡಿದ ಅವರು ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ರೋಗಿಗಳಿಗೆ ಬೆಳಿಗ್ಗೆ -ತಿಂಡಿ. ಮತ್ತು ಮಧ್ಯಾಹ್ನ-.ರಾತ್ರಿ ಊಟ  ದಿನಕ್ಕೆ 3 ಬಾರಿ ಕಷಾಯ ಶುದ್ಧ ಕುಡಿಯುವ ಬಿಸಿ ನೀರು ಕೊಡಲಾಗುತ್ತದೆ ಅವರಿಗೆ ಆಹಾರ ಪಾಕೆಟ್ ಮಾಡಿ ಎಲ್ಲಾಸೋಂಕಿತರಿಗೆ ರುಚಿಯಾಗಿ ಅಡಿಗೆಮಾಡಿಕೊಡಲಾಗುತ್ತದೆ ಮತ್ತು ಅಲ್ಲಿ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳಿಗೆ ಕೋರೋನ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಸರಿಯಾದ ಸಮಯಕ್ಕೆ ಅವರಿಗೆ ಔಷಧವನ್ನು ಕೊಡಬೇಕು ಕೋವಿಡ್ ಕೇರ್ ಸೆಂಟರ್ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದೇನೆ ಎಂದರು  ಈ ಸಂದರ್ಭದಲ್ಲಿ ಬಿಳಿಚೋಡು ಕಂದಾಯ ನಿರೀಕ್ಷಕರಾದ ಧನಂಜಯ. ಕುಬೇರ ನಾಯ್ಕ್ ಸಿಬ್ಬಂದಿ ವಿಜಯಕುಮಾರ್ ಶಾಲೆಯ ಪ್ರಾಂಶುಪಾಲರಾದ ರೂಪಕಲಾ ಮತ್ತು ವೈದ್ಯರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಭಾಗವಹಿಸಿದ್ದರು