ಕೋವಿಡ್ ಕೇರ್ ಸೆಂಟರ್‌ಗೆ ಮುಖ್ಯಾಧಿಕಾರಿ ಭೇಟಿ

ಸಿರವಾರ.ಮೇ.೩೧-ಕೋವಿಡ್ ವೈರಸ್ ಸೊಂಕು ಬಂದಿದೆ, ಜೀವ ಹೋಗಿ, ಜೀವನ ಇಲಿಗೆ ಮುಗಿಯುತ್ತದೆ ಎಂದು ಯೋಚನೆ ಮಾಡದೆ, ಅದು ಗುಣಮುಖವಾಗುತ್ತದೆ ಎಂದು ಆತ್ಮಸ್ಥೈರ್ಯದಿಂದ ಚಿಕಿತ್ಸೆ ಪಡೆದರೆ ಗುಣಮಖರಾಗಿ ಸಹಜ ಜೀವನ ನಡೆಸಬಹುದು ಎಂದು ಪ.ಪಂ ಮುಖ್ಯಾಧಿಕಾರಿ ಕೆ.ಮುನಿಸ್ವಾಮ ಹೇಳಿದರು.
ತಾಲೂಕಿನ ನವಲಕಲ್ಲು ಹೊರವಲಯದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಭಾನುವಾರ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದ ಅವರು, ಕೇಂದ್ರದಲ್ಲಿ ಸೋಂಕಿತರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದಕ್ಕೂ ಕೊರತೆ ಇಲ್ಲಾ. ಇಲ್ಲಿ ಸದ್ಯ ೩೬ ಸೋಂಕಿತರು ದಾಖಲಾಗಿದ್ದು, ಇಂದು ೧೨ ಆರೋಗ್ಯವಂತರಾಗಿ ಸೋಂಕಿನಿಂದ ಮುಕ್ತರಾಗಿ ಮನೆಗೆ ವಾಪಾಸಾಗಿದ್ದಾರೆ. ಮುಂದೆಯೂ ಸಹ ಎಚ್ಚರಿಕೆಯಿಂದ ಇರಬೇಕು. ಇತ್ತರರಿಗೆ ಆರೋಗ್ಯ ಸಲಹೆ ಸೂಚನೆಗಳನ್ನು ನೀಡಬೇಕು.
ಸೋಂಕಿತರ ಆರೋಗ್ಯ ಸುಧಾರಣೆಯ ಜೊತೆಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ಸಂಜೀವಿನಿ ಟ್ರಸ್ಟ್ ಅಧ್ಯಕ್ಷ ಜ್ಞಾನಮಿತ್ರ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಶರಣಬಸವ, ಸಚಿನ್ ಚ್ಯಾಗಿ, ವೀರೇಶನೇಕಾರ ಇದ್ದರು.