ಕೋವಿಡ್ ಕೇರ್ ನಲ್ಲಿದ್ದ ರೋಗಿಗಳು ಗುಣಮುಖ: ಡಿಸ್ಚಾರ್ಜ್

ರಾಯಚೂರು.31- ದೇವದುರ್ಗ ತಾಲೂಕಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಕ್ವಾರಂಟೈನ್ ಆಗಿದ್ದ ಕೋವಿಡ್ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದು ಅವರನ್ನು ಸೋಮವಾರ ಡಿಸ್ಚಾರ್ಜ್ ಮಾಡಲಾಯಿತು.
ಈ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ನ ವೈದ್ಯಕೀಯ ಅಧಿಕಾರಿ ಡಾ.ರಿಯಾಜ್, ಡಾ.ಹಸನ್ ಅಂಜಲ್ ಶಿಬಿರಾಧಿಕಾರಿಗಳಾದ ಲಾಲ್ ಅಹ್ಮದ್, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.