ಕೋವಿಡ್ ಕೇರ್ ಕೇಂದ್ರ ಸ್ಫಾಪನೆ


ಚನ್ನಮ್ಮನ ಕಿತ್ತೂರ,ಮೇ.15:ಕೋವಿಡ್ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ಥಳೀಯ ಶಕುಂತಲಾ ಗಡಗಿ ಗ್ರಾಮೀಣ ಆಸ್ಪತ್ರೆಯಲ್ಲಿ ಕೋರೋನಾ ಕೇರ್ ಸೇಂಟರ್ ಸ್ಥಾಪಿಸಿ ಮತ್ತು ಉದ್ಘಾಟಿಸಿ ಮಾತನಾಡಿದ ಶಾಸಕ ವiಹಾಂತೇಶ ದೊಡ್ಡಗೌಡ್ರ ಇದಕ್ಕೆ ಚಿಕಿತ್ಸೆ ನೀಡುವ ವೈದ್ಯರುಗಳೇ ದೇವರೆಂದರು. ಶಕುಂತಲಾ ಗಡಗಿ ಗ್ರಾಮೀಣ ಆಸ್ಪತ್ರೆಯಲ್ಲಿ ಸದ್ಯ 7 ಆಕ್ಸಿಜನ್ 20 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿದ್ದರೆ ಇನ್ನೂ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಸಹ ವ್ಯವಸ್ಥೆ ಕಲ್ಪಿಸಲಾಗುವುದೆಂದರು.
ತಹಶೀಲ್ದಾರ ಸೋಮಲಿಂಗಪ್ಪ ಹಲಗಿ ಮಾತನಾಡಿ ಕೋರೋನಾ 2ನೇ ಅಲೆ ವೇಗವಾಗಿ ಹೆಚ್ಚಾಗುತ್ತಿದೆ. ಅನಾವಶ್ಯಕವಾಗಿ ರಸ್ತೆಯ ಮೇಲೆ ತಿರುಗಾಡಬೇಡಿ. ಮದುವೆ, ಸಭೆ, ಜಾತ್ರೆ, ಸಮಾರಂಭ, ನೀವೆ ತಿಳಿದು ಎಚ್ಚರ ವಹಿಸಬೇಕು. ಜನ ಸಂದಣಿವುಂಟಾದರೆ ಅದರ ವೇಗ ಹೆಚ್ಚಾಗುತ್ತದೆ. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅದರಂತೆ ಸರಕಾರದÀ ನಿಯಮಗಳನ್ನು ಉಲ್ಲಂಘನೆ ಮಾಡಬಾರದು. ಮಾಸ್ಕ್ ಹಾಗೂ ಸಾನಿಟೈಜರ್ ಬಳಸಬೇಕು. ವೈದ್ಯರು ಚಿಕಿತ್ಸೆ ಮಾಡುವಾಗ ಸಾರ್ವಜನಿಕರು ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಗಡಗಿ ಆಸ್ಪತ್ರೆ ಡಾ|| ಚಂದ್ರಶೇಖರ, ಡಾ|| ಎಸ್.ಎಂ. ಹೊತಗಿಮಠ, ಸಮುದಾಯ ಆರೋಗ್ಯ ಕೇಂದ್ರದ ಡಾ|| ಜ್ಯೋತಿ, ಪ.ಪಂ. ಮುಖ್ಯಾಧಿಕಾರಿ ಪ್ರಕಾಶ ಮಠದ, ಕಂದಾಯ ನಿರೀಕ್ಷಕ ಬಿ.ವ್ಹಿ.ಬಡಗಾಂವಿ, ಪಿ.ಎಸ್.ಆಯ್. ದೇವರಾಜ ಉಳ್ಳಾಗಡ್ಡಿ, ಇನ್ನೂ ಹಲವರು ಇದ್ದರು.