ಕೋವಿಡ್ ಕೇಂದ್ರಕ್ಕೆ ತಹಶೀಲ್ದಾರ್ – ನೋಡಲ್ ಅಧಿಕಾರಿಗಳ ತಂಡ ಭೇಟಿ

ಹರಿಹರ.ಏ.30;  ನಗರದ ಹೊರವಲಯದಲ್ಲಿರುವ ಕೋವಿಂಡ ಕೇರ್ ಸೆಂಟರ್ ಕೇಂದ್ರಕ್ಕೆ ತಹಶೀಲ್ದಾರ್ ನಗರಸಭೆ ಆರೋಗ್ಯ ಇಲಾಖೆ ನೋಡಲ್ ಅಧಿಕಾರಿಗಳು ತಂಡ ಮುಂಜಾಗ್ರತಾ ಕ್ರಮವಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ತಾಲ್ಲೂಕಿನಲ್ಲೂ ಸೋಂಕಿತರ ಪ್ರಮಾಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯವನ್ನು ಕೋವಿಡ್ ಸೆಂಟರ್ ಮಾಡಿ ವೈರಸ್ ದೃಢ ಪಟ್ಟವರಿಗೆ  ಇರುವುದಕ್ಕೆ ವ್ಯವಸ್ಥೆಯನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸಿ   ಸರಿಯಾದ ಸಮಯಕ್ಕೆ  ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ .ತಾಲ್ಲೂಕಿನಲ್ಲಿ ದಿನದಿನಕ್ಕೆ ವೈರಸ್ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ ಕೇಂದ್ರಕ್ಕೆ ಭೇಟಿ ನೀಡಿ ಸ್ವಚ್ಛತೆ ಮತ್ತು ಸೋಂಕಿತರಿಗೆ ನಿಗದಿತ ಸಮಯಕ್ಕೆ ಔಷಧಿ ಚಿಕಿತ್ಸೆ ಊಟದ ಉಪಚಾರ 
ಮತ್ತು ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ  ವಿವಿಧ ಇಲಾಖೆಯ ತಂಡದೊಂದಿಗೆ  ಆಗಮಿಸಿ ವೈರಸ್ ದೃಢಪಟ್ಟ ಅವರಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದು ಎಂಬ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ ಎಂದು ತಹಸೀಲ್ದಾರ್ ಕೆ ಬಿ ರಾಮಚಂದ್ರಪ್ಪ .ಮತ್ತು ತಾಲ್ಲೂಕು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಆಡಳಿತ ವೈದ್ಯಾಧಿಕಾರಿ ಡಾ ಚಂದ್ರಮೋಹನ ಡಿ ಹೇಳಿದರು. ನಗರಸಭೆ ಆಯುಕ್ತೆ ಲಕ್ಷ್ಮೀ ಎಸ್ .ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್ ಎಸ್ ಬಿರಾದಾರ. ಹಿರಿಯ ಸಹಾಯಕ ಅಭಿಯಂತರಾದ ಮಂಜುನಾಥ್. ನೋಡಲ್ ಅಧಿಕಾರಿ ರೇಷ್ಮಾ ಕೌಸರ್ ಜಿ .ಸಹಾಯಕ ನೋಡಲ್ ಅಧಿಕಾರಿ ಸೈಯದ್ ನಸರುದ್ದೀನ್ ಎಚ್ ಎ.     ಪರ್ವಿನ್ .ರಂಗನಾಥ್ .ರಹಮತ್  .ತಾಲ್ಲೂಕು ಕಚೇರಿಯ ಶಿರಸ್ತೇದಾರ್ ಚನ್ನವೀರಸ್ವಾಮಿ .ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್ .ನಗರ ಗ್ರಾಮ ಲೆಕ್ಕಾಧಿಕಾರಿ ಎಚ್ ಜಿ ಹೇಮಂತ್ ಕುಮಾರ್ .ವೈದ್ಯರಾದ ವಿಶ್ವನಾಥ್ ಕುಂದಗೋಳ .ಕಂದಾಯ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಇದ್ದರು