ಕೋವಿಡ್ ಕೆಲಸಕ್ಕೆ ಮೊದಲ ಆದ್ಯತೆ ನಂತರ ಕಚೇರಿ ಕೆಲಸ ಮಾಡಲು ಸಲಹ

 ಹರಿಹರ. ಮೇ .1; ಜಿಲ್ಲೆಯ ಹಿತದೃಷ್ಟಿಯಿಂದ ಕೋವಿಡ್ ಕೆಲಸಕ್ಕೆ ಮೊದಲ ಆದ್ಯತೆ ನೀಡಿ,ನಂತರ ನಿಮ್ಮ ಕಚೇರಿ ಕೆಲಸ ಗಳನ್ನು ಮಾಡಿ ತಪ್ಪದೇ ಎಲ್ಲರೂ ಇದನ್ನು ಪಾಲಿಸಿರಿ ಎಂದು ಉಪ-ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸಿಬ್ಬಂದಿಗೆ ಸೂಚನೆ ನೀಡಿದರು.   ನಗರದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಕೊರೋನ ಕೆಲಸಕ್ಕೆ ನಿಯಮಿಸಲಾದ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಲು ಕರೆದಿದ್ದ ತುರ್ತುಸಭೆ ನಡೆಸಿ ಮಾತನಾಡಿದ ಅವರು,ಸೋಂಕಿತರ ಜೊತೆಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಬೇಟಿ ಮಾಡಿ ಗುರುತಿಸಬೇಕು. ಆದರೆ ನೀವುಗಳು ಆಶಾ ಕಾರ್ಯಕರ್ತೆಯರು ನೀಡಿದ ಅಂಕಿ-ಅಂಶಗಳನ್ನು ಅಪ್ಲೋಡ್ ಮಾಡುತ್ತಿದ್ದೀರಿ ಇದು ತಪ್ಪು ಎಂದು ಗ್ರಾಮ ಸಹಾಯಕರನ್ನು ತರಾಟೆಗೆ ತೆಗೆದು ಕೊಂಡರು.    ಪ್ರಾಥಮಿಕ ಸೋಂಕಿತರ ಮಾಹಿತಿಯನ್ನು 24 ಗಂಟೆಯೊಳಗಾಗಿ ದ್ವಿತೀಯ ಸಂಪರ್ಕಿತ ರನ್ನು 48 ಗಂಟೆಗಳ ಒಳಗಾಗಿ ಕನಿಷ್ಠ 30 ಜನರನ್ನು ಗುರುತಿಸಿ ಅವರನ್ನು ಸಂಪರ್ಕಿಸಬೇಕೆಂಬ ನಿಯಮವಿದ್ದರೂ ಯಾರು ಪಾಲಿಸದೆ ತಮಗೆ ತಿಳಿದಂತೆ ಅಂಕಿಅಂಶ ಗಳನ್ನು ಕಳಿಸುತ್ತಿದ್ದೀರಿ ಎಂದು ತಮ್ಮ ಜೊತೆಯಲ್ಲಿ ತಂದಿದ್ದ ಪಟ್ಟಿಯಿಂದ ಪ್ರತಿಯೊಬ್ಬ ಸಿಬ್ಬಂದಿಯನ್ನು ಪರೀಕ್ಷಿಸಿದರು.     ಇದೇ ರೀತಿ ನಿಮ್ಮ ಕರ್ತವ್ಯ ಮುಂದುವರಿದರೆ ಜಿಲ್ಲೆಯಲ್ಲಿ 3 ನೇ ಮತ್ತು 4 ನೇ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು. ಸೋಂಕಿತರು ಬೇರೆ ತಾಲೂಕು ಅಥವಾ ಜಿಲ್ಲೆಯವರಾಗಿದ್ದಾರೆ ಅಲ್ಲಿನ ಅಧಿಕಾರಿಗಳ ಮೊಬೈಲ್ ನಂಬರ್ ಪಡೆದು ಅವರನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ಮುಟ್ಟಿಸ ಬೇಕು, ಬರೀ ವರದಿ ಬರೆಯುವುದಿಲ್ಲ ಎಂದು ತಿಳಿಸಿದರು.       ಸೋಂಕಿತರು ಮತ್ತು ಸಂಪರ್ಕಿತರನ್ನು ಭೇಟಿಯ ಸಂದರ್ಭದಲ್ಲಿ ಕೆಲವರು ಸಹಕಾರ ನೀಡಲು ವಿರೋಧ ವ್ಯಕ್ತಪಡಿಸಿ, ಬಾಯಿಗೆ ಬಂದಂತೆ ಮಾತ ನಾಡುತ್ತಾರೆ ಎಂದು ಕೆಲ ಗ್ರಾಮಲೆಕ್ಕಿಗರು ಹೇಳಿದಾಗ, ಅಂತಹ ಸಂದರ್ಭಗಳಲ್ಲಿ ಪೊಲೀಸರ ಸಹಾಯ ಪಡೆದುಕೊಳ್ಳಿರಿ ಸಮಯ ಬಂದರೆ ಪ್ರಕರಣ ದಾಖಲಿಸಿರಿ ಎಂದು ತಹಸಿಲ್ದಾರ್ ಕೆ.ಬಿ.  ರಾಮಚಂದ್ರಪ್ಪನವರಿಗೆ  ಸೂಚಿಸಿದರು.    ಈ ಸಮಯದಲ್ಲಿ ಪೌರಾಯುಕ್ತೆ ಎಸ್.ಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಲ್.ಹನುಮಾ ನಾಯಕ್, ಮಲೆಬೆನ್ನೂರು ಉಪ-ತಹಸೀಲ್ದಾರ್ ರವಿ, ನಗರದ ವೈದ್ಯಾಧಿಕಾರಿ ಗಳು, ರಾಜಸ್ವನಿರೀಕ್ಷಕರಾದ ಆನಂದ್, ಸಮೀರ್ ಅಹಮದ್, ಸಿಬ್ಬಂದಿಗಳಾದ ಸಂತೋಷ್,ಎಚ್.ಜಿ. ಹೇಮಂತ್ ಸೇರಿದಂತೆ ಎಲ್ಲಾ ಗ್ರಾಮ ಲೆಕ್ಕಾಧಿಕಾರಿ ಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.