ಕೋವಿಡ್: ಕುಲಪತಿರವರಿಂದ ಜಾಗೃತಿ

ಮೈಸೂರು: ಏ.29: ಕೊರೋನಾ ತಡೆಗಾಗಿ ರಾಜ್ಯ ಸರ್ಕಾರ 14 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡಿದ್ದು ಇಂದು ಲಾಕ್ ಡೌನ್ 2ನೇ ದಿನವಾಗಿದೆ. ಇಂದು ಕೂಡ ಆಗತ್ಯ ವಸ್ತುಗಳ ಖರೀದಿಗೆ ಬೆಳ್ಳಗ್ಗೆ 6 ರಿಂದ 10 ವರಗೆ ಮಾತ್ರ ಅವಕಾಶ ನೀಡಲಾಗಿದೆ.
ಈ ಮಧ್ಯೆ ನಗರ ಎಂ ಜಿ ರಸ್ತೆಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದ ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡುವ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಾ.ವಿದ್ಯಾಶಂಕರ್ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದರು.
ಕೆಎಸ್ ಒಯು ಕುಲಪತಿ ಡಾ.ವಿದ್ಯಾಶಂಕರ್ .ಎಸ್ ಅವರು ಕೊರೊನ ಜಾಗೃತಿ ಅಭಿಯಾನ ಮತ್ತು ಅರಿವು ಮೂಡಿಸುವ ಸಲುವಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಹಿಂಭಾಗದಲ್ಲಿರುವ ತರಕಾರಿ ಮಂಡಿಯಲ್ಲಿ ಸಾರ್ವಜನಿಕರಿಗೆ ಮಾಸ್ಕ್ & ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರ ಎಂ ಜಿ ರಸ್ತೆಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದ ಜನರಿಗೆ ಕೊರೊನ ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನರ ಮಧ್ಯೆ ಮಂಗಳಮುಖಿಯರಿಗೂ ಸಹ ಕುಲಪತಿ ಡಾ. ವಿದ್ಯಾಶಂಕರ್ ಅವರು ಮಾಸ್ಕ್ ಹಾಗೂ ಸ್ಯಾನಿ ಟೈಸ್ ವಿತರಿಸಿದರು.
ಕೆಎಸ್ ಒಯು ರಿಜಿಸ್ಟ್ರಾರ್ ಎ.ಖಾದರ್ ಪಾಷಾ, ಪರೀಕ್ಷಾಂಗ ಕುಲಸಚಿವ ಪೆÇ್ರ. ಮಹದೇವನ್, ಡೀನ್ ಗಳಾದ ಡಾ.ಅಶೋಕ್ ಕಾಂಬ್ಳೆ, ಡಾ. ಷಣ್ಮುಖ, ಸಹಾಯಕ ಕಾರ್ಯಪಾಲಕ ಅಭಿಯಂತರು ಭಾಸ್ಕರ್, ಉಪಕುಲಸಚಿವ ಚಂದ್ರೇಶ್, ಕುಲಪತಿ ವಿಶೇಷ ಕರ್ತವ್ಯಾಧಿಕಾರಿ ಪೆÇ್ರ. ದೇವರಾಜ್, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಳ್ಳಿ ಸತ್ಯನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.