ಕೋವಿಡ್ ಕಾಳಜಿ ಕೇಂದ್ರ ಪ್ರಾರಂಭಿಸಲು ಕೋನರೆಡ್ಡಿ ಆಗ್ರಹ


ಅಣ್ಣಿಗೇರಿ,ಜೂ3: ನಗರದಲ್ಲಿ ಕೋವಿಡ್ ಕಾಳಜಿ ಕೇಂದ್ರವನ್ನು ದೇವರಾಜ ಅರಸು ಮೆಟ್ರೀಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಈಗಾಗಲೇ ಪ್ರಾರಂಭಿಸಲಾಗಿದೆ.
ಇದು ತಾಲ್ಲೂಕಾ ಕೇಂದ್ರವಾಗಿದ್ದು ಸರ್ಕಾರದ ಆದೇಶದಂತೆ ಡೆಸಿಗ್ನೆಟೆಡ್ ಕೋವಿಡ್ ಹೆಲ್ತ್ ಸೆಂಟರ್ (ಡಿ.ಸಿ.ಹೆಚ್.ಸಿ) ಪ್ರಕಾರ ಕೋವಿಡ್ ಸೆಂಟರ್ ತಾಲ್ಲೂಕಾ ಕೇಂದ್ರದಲ್ಲಿ ಪ್ರಾರಂಭಿಸಲು ಸರ್ಕಾರ ನಿರ್ದೇಶನ ನೀಡಿದೆ. ಆದರೆ, ಇಲ್ಲಿಯವರೆಗೆ ಸರ್ಕಾರದ ಆದೇಶದ ಪ್ರಕಾರ ಕೋವಿಡ್ ಸೆಂಟರ್ ಪ್ರಾರಂಭಿಸಲು ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಒತ್ತಾಯಿಸಿದ್ದಾರೆ.
ಅವರು ಅಣ್ಣಿಗೇರಿ ಕೋವಿಡ್ ಕೇರ್ ಸೆಂಟರ್ ಹಾಗೂ ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಅಣ್ಣಿಗೇರಿಯಲ್ಲಿ ಸರ್ಕಾರಿ ತಾಲ್ಲೂಕಾ ಆಸ್ಪತ್ರೆ ಹಾಗೂ ದೇವರಾಜ ಅರಸು ವಸತಿ ನಿಲಯವಿದೆ. ಈ ಭಾಗದಲ್ಲಿ ಕೋವಿಡ್ ಸೊಂಕಿತರಿಗೆ ಚಿಕಿತ್ಸೆ ಪಡೆಯಲು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಥವಾ ಗದಗ ಜಿಮ್ಸ್ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಜನತೆಗೋಸ್ಕರ ಕೋವಿಡ್ ಸೆಂಟರ್ ಪ್ರಾರಂಭಿಸುವದು ಬಹಳ ಅವಶ್ಯವಿದೆ. ತಾಲ್ಲೂಕಿನ ಕೇಂದ್ರ ಸ್ಥಳ ಹಾಗೂ ಈ ಭಾಗದ ಜನತೆಯ ಪರವಾಗಿ ಸರ್ಕಾರದ ನಿರ್ದೇಶನದ ಪ್ರಕಾರ ಪೂರ್ಣ ಪ್ರಮಾಣದಲ್ಲಿ ತಕ್ಷಣ ಅಣ್ಣಿಗೇರಿಯಲ್ಲಿ ಕೋವಿಡ್ ಸೆಂಟರ್ ಪ್ರಾರಂಭಿಸಬೇಕು.
ಆಸ್ಪತ್ರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾಗುವ ವೈಧ್ಯರು ಹಾಗೂ ಸಿಬ್ಬಂಧಿ ಸಧ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಅಣ್ಣಿಗೇರಿ ಆಸ್ಪತ್ರೆಯನ್ನು ತಾಲ್ಲೂಕಾ ಆಸ್ಪತ್ರೆಯಾಗಿ ಮೇಲ್ದರ್ಜೆ ಏರಿಸಿ ತಾಲ್ಲೂಕಾ ಆಸ್ಪತ್ರೆಗೆ ಇರುವ ಸಂಖ್ಯೆಯ ವಿವಿಧ ತಜ್ಞ ವೈಧ್ಯರು ಹಾಗೂ ಸಿಬ್ಬಂಧಿ ಕಾರ್ಯನಿರ್ವಹಿಸುವಂತೆ, ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆ ಎಂದು ಮೇಲ್ದರ್ಜೆಗೆ ಏರಿಸಿ ಸರ್ಕಾರ ಆದೇಶ ಮಾಡಬೇಕೆಂದು ಹಾಗೂ ಆಸ್ಪತ್ರೆಗೆ ಪ್ರತ್ಯೇಕ ಆಂಬ್ಯೂಲೆನ್ಸ್ ಒದಗಿಸಬೇಕೆಂದು ಕೋನರಡ್ಡಿ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೆಂಕಣ್ಣ ಹೊನ್ನನಾಯ್ಕರ, ದಾವಲಸಾಬ ದರವಾನಿ, ಶ್ರೀಕಾಂತ ಕೋಳೀವಾಡ, ಹನಸ ಗಡ್ಡದ, ದಸ್ತಗೀರ ಸಂಗಟಿ, ಹಟೇಲಸಾಬ ಗಾಡಗೋಳಿ, ಆಸೀಫ ಗುಳೇದಗುಡ್ಡ, ಇಮಾಮಸಾಬ ಕೋಡ್ಲಿವಾಡ ಇತರರು ಉಪಸ್ಥಿತರಿದ್ದರು.