ಕೋವಿಡ್ ಕರ್ತವ್ಯಕ್ಕೆ ಗೈರಾದರೆ ಮೊಕದ್ದಮೆ ದಾಖಲು – ಜಿಲ್ಲಾಧಿಕಾರಿ

ಹಾವೇರಿ:ಏ.30:ಕೋವಿಡ್-19 ಎರಡನೇ ಅಲೆಯ ನಿಯಂತ್ರಣ ನಿಟ್ಟಿನಲ್ಲಿ ವಿವಿಧ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು ನೌಕರರು ಗೈರಾದರೆ ವಿಪತ್ತು ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಎಚ್ಚರಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ನಂತರ ಕೋವಿಡ್ ನಿಯಂತ್ರಣ ದೈನಂದಿನ ಪ್ರಗತಿ ಮಾಹಿತಿ ಪಡೆದುಕೊಂಡ ಅವರು ಕೋವಿಡ್ ಕರ್ತವ್ಯಕ್ಕೆ ನೇಮಕ ಗೊಂಡವರು ಗೈರಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯಿಂದ ಬಂದವರ ಮಾಹಿತಿ ಸಂಗ್ರಹ ತಪಾಸಣೆ, ಸೋಂಕಿತರ ಸಂಪರ್ಕ ಪತ್ತೆಕಾರ್ಯ ತ್ವರಿತಗೊಳಿಸಿ ನಿಖರವಾಗಿ ದಾಖಲಿಸುವ ಕಾರ್ಯವನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಪ್ರಕರಣಗಳ ನಿರ್ವಹಣೆಗೆ ಜಿಲ್ಲೆಗೆ ಅಗತ್ಯವಾಗಿ ಬೇಕಾದ ವೈದ್ಯಕೀಯ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ತಾತ್ಕಾಲಿಕವಾಗಿ ನೇಮಕ ಮಾಡಿಕೂಳ್ಳಿ ಎಮ್ ಬಿ ಬಿ ಎಸ್ ವೈದ್ಯರು ದೊರೆಯದಿದ್ದರೆ ಬಿಡಿಎಸ್ ದಂತ ವೈದ್ಯರು ಆಯುಷ ವೈದ್ಯರನ್ನ ನೇಮಕ ಮಾಡಿಕೊಳ್ಳಿ ತಾಂತ್ರಿಕಸಮಿತಿಯಿಂದ ನಿಯಮಾನುಸಾರ ಅನುಮೋದನೆ ಪಡೆದುಕೊಳ್ಳಲು ಸೂಚನೆ ನೀಡಿದರು.
ಕೋವಿಡ್ ಕಾರ್ಯದಲ್ಲಿ ತೊಡಗಿರುವ ಅಧಿಕಾರಿ ಸಿಬ್ಬಂದಿ ಸಾನಿಟೈಸರ್ ಮಾಸ್ಕ್ ಪೂರೈಸಿ ಖರೀದಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರದ ಪ್ರಾಮಾಣಿಕೃತ ಮಾರ್ಗಸೂಚಿ ಅನುಸಾರವಾಗಿ ಅಗತ್ಯವಿದ್ದವರಿಗೆ ಮಾತ್ರ ರೆಮಿಡಿಸಿವರ್ ವೈಲ್ ನೀಡಬೇಕು ಈ ಕುರಿತು ಸರಿಯಾಗಿ ಆಡಿಟ್ ಮಾಡಬೇಕು, ಜಿಲ್ಲೆಯ ಕೋವಿಡ್ ಹೆಲ್ಪಲೈನ್ ಕಾರ್ಯಾರಂಭಗೊಳಿಸಬೇಕು, ನಗರ ವ್ಯಾಪ್ತಿಯಲ್ಲಿ ಸೋಂಕಿತರ ಸಂಪರ್ಕ ಪತ್ತೆಕಾರ್ಯ ನಿಗಧಿತ ಪ್ರಮಾಣಕ್ಕಿಂತ ಕಡಿಮೇ ಇದೆ, ಹೆಚ್ಚಿಗೆ ಆಗುವಂತೆ ಕ್ರಮವಹಿಸಿ ಎಂದು ಸೂಚಿಸಿದರು.
ಸೋಂಕಿತರ ಸಂಪರ್ಕಪತ್ತೆ, ಟ್ರ್ಯಾಕಿಂಗ್, ಐಸೋಲೆಶನ್ ದಾಖಲಿಕರಣ ಕಾರ್ಯದ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಈ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸಿಬ್ಬಂದಿಗಳು ಸಮನ್ವಯತೆಯಿಂದ ಕೆಲಸಮಾಡ ಬೇಕು. ಎರಡು ಇಲಾಖೆಯ ಜಿಲ್ಲಾ ಮುಖ್ಯಸ್ಥರು ಸಭೆ ನಡೆಸಿ ಸೂಕ್ತ ಮಾರ್ಗ ದರ್ಶನ ನೀಡಬೇಕು ತಪ್ಪುಗಳು ಮರುಕಳಿಸ ದಂತೆ ಎಚ್ಚರವಹಿಸಿ ಎಂದು ತಾಕೀತು ಮಾಡಿದರು.
ಕಟ್ಟು ನಿಟ್ಟು : ವಿವಿಧ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೇನ್ಸ್ ಸಭೆಯಲ್ಲಿ ಮಾತನಾಡಿ ಕೋವಿಡ್ ನಿಯಂತ್ರಣ ಕ್ರಮಗಳು ಹಾಗೂ ವೈದ್ಯಕೀಯ ವ್ಯವಸ್ಥೆ ಕುರಿತಂತೆ ಜಿಲ್ಲಾವಾರು ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರು ಮೇ 12 ರ ವರೆಗೆ ಜಾರಿಗೊಳಿಸಿರುವ ಜನತಾಕಪ್ರ್ಯೂ ಕಟ್ಟುನಿಟ್ಟಾಗಿ ಪಾಲಿಸಬೇಕು ಯಾವುದೇ ಮುಲಾಜಿಲ್ಲದೆ ಕಾರ್ಯರೂಪಗೊಳಿಸಿ ಕೋವಿಡ್ ನಿಯಂತ್ರಣಕ್ಕೆ ತರಬೇಕು ಇಲ್ಲವಾದರೆ ಕಪ್ರ್ಯೂ ವಿಸ್ತರಿಸ ಬೇಕಾದೀತು ಎಂದು ಎಚ್ಚರಿಸಿದರು
ಬೆಂಗಳೂರಿನಿಂದ ಹಳ್ಳಿ ಹಳ್ಳಿಗೂ ಜನರು ಬಂದಿದ್ದಾರೆ ಈ ಬಗ್ಗೆ ತೀವ್ರನಿಗಾವಹಿಸಿ ಬಂದವರ ತಪಾಸಣೆ ನಡೆಸಿ ಮನೆಯಲ್ಲೆ ಉಳಿಯುಂತೆಮಾಡಿ, ಕೋವಿಡ್ ಲಕ್ಷಣಗಳಿದ್ದರೆ ಮಾರ್ಗ ಸೂಚಿಯಂತೆ ಕ್ರಮವಹಿಸಿ ಎಂದರು
ಮನೆಯಲ್ಲೆ ಚಿಕಿತ್ಸೆ ಪಡೆಯುವವರಿಗೆ ವೈದ್ಯಕಿಯ ನಿಗಾವಹಿಸಿ ಮೆಡಿಕಲ್ ಕಿಟ್ ಗಳನ್ನು ನೀಡಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿ, ರೆಮಿಡಿಸಿವಿಯರ್ ಅಗತ್ಯವಿದ್ದವರಿಗೆ ಮಾತ್ರ ಬಳಸಿ ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಹೆಚ್ಚಿನ ಜವಾಬ್ದಾರಿ ತೆಗೆದು ಕೊಳ್ಳುವಂತೆ ಸೂಚಿಸಿದರು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್ ಅವರು ಮಾತನಾಡಿ ಗ್ರಾಮೀಣ ಕೋವಿಡ್ ಟಾಸ್ಕ್ ಪೋರ್ಸ್ ಚುರುಕು ಗೊಳಿಸಿ ಹಳ್ಳಿಗೆ ಬಂದವರ ತಪಾಸಣೆ ನಡೆಸಿ, ನಿಗಾವಹಿಸಿ ಹಳ್ಳಿ ಹಳ್ಳಿಗಳಲ್ಲೂ ಲಾಕಡೌನ್ ಬಿಗಿಗೂಳಿಸಿ ಸರ್ಕಾರದ ಹೊಸ ಮಾರ್ಗ ಸೂಚಿಯಂತೆ ತಪಾಸಣೆ ಲಸಿಕೆ, ಸಂಪರ್ಕ ಪತ್ತೆ, ಐಸೋಲೇಶನ್ ವ್ಯವಸ್ಥೆ ಸಮಪರ್ಕವಾಗಿ ಕೈಗೊಳ್ಳಿ, ಅಗತ್ಯವಾದ ವೈದ್ಯಕೀಯ ಅಗತ್ಯಗಳನ್ನು ಸ್ಥಳೀಯವಾಗಿಯೇ ಖರೀದಿಗೆ ಅವಕಾಶ ನೀಡಲಾಗಿದೆ ಜಿಲ್ಲಾಧಿಕಾರಿಗಳಿಗೆ ಎಲ್ಲಾ ಅಧಿಕಾರ ನೀಡಲಾಗಿದೆ ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಗಳಿಗೆ ಸರ್ಕಾರ ದಿಂದ ಎಲ್ಲ ನೆರವು ನೀಡಲಾಗುವದು ಎಂದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ ಜಿ ದೇವರಾಜ, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಂತೋಷ ವಿಜಯಕುಮಾರ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.