ಕೋವಿಡ್ ಎದುರಿಸಲು ಯುದ್ದೋಪಾಧಿಯಲ್ಲಿ ಲಸಿಕಾ ಕಾರ್ಯ ನಡೆಯಬೇಕು: ರೈ ಒತ್ತಾಯ

ಸುಳ್ಯ, ಜೂ.೬-ಜನರನ್ನೂ, ದೇಶವನ್ನೂ ಸಂಕಷ್ಟಕ್ಕೆ ಸಿಲುಕಿಸಿರುವ ಕೊರೋನಾದಿಂದ ಹೊರ ಬರಲು ಇರುವ ಏಕೈಕ ಅಸ್ತ್ರ ಕೋವಿಡ್ ಲಸಿಕೆ. ಸಮರೋಪಾಧಿಯಲ್ಲಿ ಎಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ರಮ ಆಗಬೇಕಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಲಸಿಕಾ ಕಾರ್ಯಕ್ಕೆಂದು ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತಿತರ ನಿಧಿ ಸೇರಿ ಕೆಪಿಸಿಸಿ ವತಿಯಿಂದ ೧೦೦ ಕೋಟಿ ರೂ ಸಂಗ್ರಹಿಸಿ ನೀಡಲಾಗಿದೆ. ಅದಕ್ಕೆ ಸರಕಾರ ಅನುಮತಿ ನೀಡುತ್ತಿಲ್ಲ. ಈ ಅನುದಾನದ ಬಳಕೆಗೆ ಸರಕಾರ ಅನುಮತಿ ನೀಡಬೇಕು ಎಂದ ಅವರು ಕೇಂದ್ರ ಮತ್ತು ರಾಜ್ಯ ಸರಕಾರ ಸೇರಿ ಎಲ್ಲರಿಗೂ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ನಡೆಸಬೇಕು. ಕೇಂದ್ರದಿಂದ ಪಡೆದು ರಾಜ್ಯ ಸರಕಾರ ಜನರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರಕಾರ ಘೋಷಿಸಿದ ಪ್ಯಾಕೇಜ್ ನಿಂದ ಯಾರಿಗೂ ಏನೂ ಪ್ರಯೋಜನ ಇಲ್ಲ ಎಂದ ರಮಾನಾಥ ರೈ ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ಎಷ್ಟು ಮಂದಿಗೆ ಸಿಕ್ಕಿದೆ ಎಂಬುದರ ವಿಮರ್ಶೆ, ಸಮೀಕ್ಷೆ ನಡೆಯಬೇಕು. ಕಷ್ಟ ಕಾಲದಲ್ಲಿ ಜನರಿಗೆ ಸಹಾಯಕವಾಗಿರುವುದು ಕಾಂಗ್ರೆಸ್ ಸರಕಾರ ತಂದ ಕಾರ್ಯಕ್ರಮಗಳು. ಉಚಿತ ಅಕ್ಕಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಗ್ರಾಮೀಣ ಆರೋಗ್ಯ ಕಾರ್ಯಕ್ರಮಗಳು ಜನರಿಗೆ ಸಹಾಯಕವಾಗಿದೆ ಎಂದರು. ಇಂಧನ ಬೆಲೆ ಏರಿಕೆಯಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಲು ಕಾರಣವಾಗಿದೆ ಎಂದು ಅವರು ಬೊಟ್ಟು ಮಾಡಿದರು.

ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಜಿಲ್ಲೆಯ ಕಂಪೆನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಅಭಿಯಾನಕ್ಕೆ ಅವರು ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ,ಕೆಪಿಸಿಸಿ ಸಂಯೋಜಕ ನಂದಕುಮಾರ್ ಮಡಿಕೇರಿ,ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಟಿ.ಎಂ.ಶಹೀದ್, ಎಂ.ವೆಂಕಪ್ಪ ಗೌಡ, ಕೆಪಿಸಿಸಿ ಸದಸ್ಯ ಡಾ.ಬಿ.ರಘು, ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಡಿಸಿಸಿ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಎಸ್.ಸಂಶುದ್ದೀನ್ , ಕಳಂಜ ವಿಶ್ವನಾಥ ರೈ, ಸುರೇಶ್ ಎಂ.ಎಚ್., ಆನಂದ ಬೆಳ್ಳಾರೆ, ಕೆ.ಗೋಕುಲ್ ದಾಸ್, ನಂದರಾಜ ಸಂಕೇಶ, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತ, ಶಾಫಿ ಕುತ್ತಮೊಟ್ಟೆ, ಹಮೀದ್ ಕುತ್ತಮೊಟ್ಟೆ, ರಿಯಾಝ್ ಎಸ್.ಎ. ಕಲ್ಲುಗುಂಡಿ, ಶಶಿಧರ್ ಎಂ.ಜೆ., ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ರಫೀಕ್ ಪಡು, ಭವಾನಿಶಂಕರ ಕಲ್ಮಡ್ಕ, ಬೆಟ್ಟ ಜಯರಾಮ್ ಭಟ್ , ಸದಾನಂದ ಮಾವಜಿ, ಪೈಂಬೆಚ್ಚಾಲ್, ಕೀರ್ತನ್ ಕೊಡಪಾಲ ಉಪಸ್ಥಿತರಿದ್ದರು.