ಕೋವಿಡ್: ಉಚಿತ ವಾಹನ ಸೇವೆ-ಕಿಲ್ಲೇದಾರ

ಚನ್ನಮ್ಮನ ಕಿತ್ತೂರ, ಮೇ20: ಕೋರೋನಾ 2ನೇ ಅಲೆಯೂ ದಿನದಿಂದ ದಿನಕ್ಕೆ ದೇಶ ತುಂಬೆಲ್ಲಾ ವ್ಯಾಪಕವಾಗಿ ಹರಡುತ್ತಿದ್ದು. ಜನರು ತೀರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂತಹ ಸಮಯದಲ್ಲಿ ರೋಗಿಗಳಿಗೆ ಅಂಬುಲನ್ಸ್ ಸಿಗದ ಕಾರಣ ಜನರ ಬದುಕೆ ನನ್ನ ಜೀವನವೆಂದು ತಿಳಿದು ತಾಲೂಕ ಸಮೀಪದ ಅಂಬಡಗಟ್ಟಿ ಗ್ರಾಮದ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ಅಧ್ಯಕ್ಷ ಸಮಾಜ ಸೇವಕ ಹಾಗೂ ಉದ್ಯಮಿ ಹಬೀಬ ಶಿಲ್ಲೇದಾರ ಮಾಧ್ಯಮದವರೊಂದಿಗೆ ಚರ್ಚಿಸಿ ಅವರು ತಾಲೂಕಾದ್ಯಂತ ಕೋರೊನಾ ನಾಶವಾಗುವವರೆಗೂ ಅಂಬುಲೆನ್ಸ್ ವಾಹನ ಬೇಕಾದರೆ ನನ್ನನ್ನು ಸಂಪರ್ಕಿಸಿ ನನ್ನ ದೂರವಾಣಿ ಸಂಖ್ಯೆ 9483585051 ಇಟ್ಟು ನನ್ನ ಸ್ವಂತ ಮಾರುತಿ ವಾಹನವನ್ನು ಉಚಿತವಾಗಿ ಕಳುಹಿಸಲು ಸಿದ್ಧನಿದ್ದೇನೆಂದು ಹೇಳಿದರು.
ಈಗಾಗಲೇ ಸರಕಾರಿ ವೈದ್ಯರಾದ ಡಾ|| ಮಾಸ್ತಿಹೊಳಿ ಗಮನಕ್ಕೆ ತಂದಿದ್ದೇನೆ. ಕೂಡಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ವಾಹನ ಬಳಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಅದೇ ರೀತಿ ನಾಗರಿಕರು ಸಹ ಇದರ ಸದುಪಯೋಗ ಪಡೆದುಕೊಳ್ಳುತ್ತೇವೆ ಎಂದಿದ್ದಾರೆ. ಅದಕ್ಕಾಗಿ ಸರ್ಕಾರಿ ಆದೇಶ ಪಾಲಿಸಿ ಅನಾವಶ್ಯಕವಾಗಿ ತಿರುಗಾಡಬೇಡಿ ಕಡ್ಡಾಯವಾಗಿ ಮಾಸ್ಕ್, ಸಾನಿಟೈಜರ್ ಉಪ¥ಯೋಗಿಸಬೇಕೆಂದರು. ಕೆಮ್ಮು, ಜ್ವರ, ನೆಗಡಿ ಬಂದರೆ ನಿರ್ಲಕ್ಷ ಮಾಡದೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.