ಕೋವಿಡ್: ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನಿಷೇಧ

ಬೀದರ:ಮೇ.14: ಕಿಲ್ಲರ್ ಕೊರೊನಾ ತನ್ನ ಎರಡನೇ ಅಲೆ ಭಯಾನಕವಾಗಿ ಪ್ರದರ್ಶಿಸುತ್ತಿದ್ದು ಭಾರತದಲ್ಲಂತೂ ಅದರ ವ್ಯಾಪ್ತಿ ಮೀರಿ ಹರಡುತ್ತಿದೆ. ಕರ್ನಾಟಕದ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್‍ನಲ್ಲಿ ಸಹ ಅದರ ಸೀಮೆ ಮೀರಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಸಲ್ಮಾನ ಧರ್ಮದ ಪವಿತ್ರ ಹಬ್ಬ ರಂಜಾನ್ ನಿಮಿತ್ಯ ಪ್ರತಿ ವರ್ಷ ನಗರದ ಕೇಂದ್ರ ಬಸ್ ನಿಲ್ದಾಣ ಎದುರಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಆದರೆ, ಈ ವರ್ಷ ಕೋವಿಡ್ ಮಹಾಮಾರಿ ಕಾರಣ ಸಾಮೂಹಿಕ ಪ್ರಾರ್ಥನೆ ನಿಲ್ಲಿಸಲಾಗಿದೆ. ಮುಸಲ್ಮಾನ ಬಾಂಧವರು ಸಾಮೂಹಿಕವಾಗಿ ಸೇರಬಾರದಂತೆ ಪೋಲಿಸ್ ಬಂದೊಬಸ್ತ ಹಾಕಲಾಗಿದೆ. ಕೋವಿಡ್ ಮಾರ್ಗಸೂಚಿಯಂತೆ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ ರಂಜಾನ್ ಹಬ್ಬ ಆಚರಿಸಲಾಗುತ್ತಿದೆ. ಕಳೆದ ವರ್ಷದ ರಂಜಾನ್ ಹಬ್ಬದ ಖುಷಿ ಸಹ ಕೋವಿಡ್ ಮೊದಲನೆ ಅಲೆ ತಿಂದು ಹಾಕಿರುವುದು ಗಮನಾರ್ಹ.