ಕೋವಿಡ್ ಆಹಾರ ಕಿಟ್ ವಿತರಿಸದ ಅಧಿಕಾರಿ: ಕ್ರಮಕ್ಕೆ ಯಾಕಾಪೂರ ಆಗ್ರಹ

ಚಿಂಚೋಳಿ,ಮಾ.27- ಮಹಾಮಾರಿ ಕೊರಾನಾ ಸೋಂಕಿನ ಹಿನ್ನಲೆಯಲ್ಲಿ ಸಿದ್ದಪಡಿಸಿದ್ದ ಕೋವಿಡ್-19 ಆಹಾರ ಕಿಟ್‍ಗಳನ್ನು ವಿತರಣೆ ಮಾಡದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಜೆಡಿಎಸ್ ಮುಖಂಡರಾದ ಸಂಜೀವನ ಯಾಕಪೂರ ಅವರು ಇಂದಿಲ್ಲಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತಾಲೂಕ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ಇಡಲಾಗಿರುವ ಕೋವಿಡ್ 19 ಆಹಾರ ಕೀಟಗಳನ್ನು ಚಿಂಚೋಳಿ ತಾಲೂಕಿನ ಜನರಿಗೆ ವಿತರಿಸಲು ಬಂದಿರುವ ಆಹಾರ ಕೀಟಗಳನ್ನು ಸಕಾಲದಲ್ಲಿ ವಿತರಿಸದೇ ಇರುವುದು ಮತ್ತು ಅವುಗಳನ್ನು ತಮ್ಮ ಕಚೇರಿಗಳಲ್ಲಿ ಇಟ್ಟುಕೊಂಡು ಸಂಪೂರ್ಣ ಹಾಳಾಗಿ ಹೋಗುವಂತೆ ಮಾಡಿರುವುದು ಖಂಡನೀಯ ಎಂದರು.
ಆಹಾರಕೀಟ್ ಗಳಿಗೆ ನುಸಿಗಳು ಆಗಿದ್ದು ಆಹಾರ ಕಿಟ್ಟು ಸಂಪೂರ್ಣ ಹಾಳಾಗಿದೆ, ಜನರ ಕಷ್ಟದ ಸಂದರ್ಭದಲ್ಲಿ ವಿತಣೆಮಾಡಬೇಕಾಗಿದ್ದ ಈ ಕಿಟ್‍ಗಳನ್ನು ತೋರಿತವಾಗಿ ಬಡವರಿಗೆ ವಿತರಿಸಬೇಕಾಗಿತ್ತು ಏಕೆ ವಿತರಣೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.
ಕೋವಿಡ್-19 ಆಹಾರ ಕೀಟಗಳ ನಾಶವಾಗಿರುವ ಕುರಿತು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಜೀವನ ಯಾಕಪೂರ ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.