ಕೋವಿಡ್ ಆಸ್ಪತ್ರೆಗಳಿಗೆ ಶ್ರೀ ಸಿಮೆಂಟ್‍ನಿಂದ ಆಮ್ಲಜನಕ ಪೂರೈಕೆ

ಕಲಬುರಗಿ:ಎ.24: ಭಾರತದ ಟಾಪ್ ಸಿಮೆಂಟ್ ತಯಾರಿಕಾ ಕಂಪನಿಯಾಗಿರುವ ಶ್ರೀ ಸಿಮೆಂಟ್, ದೇಶದಲ್ಲಿ ತಲೆದೋರಿರುವ ಆಮ್ಲಜನಕದ ಕೊರತೆಯನ್ನು ನೀಗಿಸುವ ಸಲುವಾಗಿ ತನ್ನ ಆಮ್ಲಜನಕ ಉತ್ಪಾದನಾ ಘಟಕಗಳಲ್ಲಿ ನೂರಕ್ಕೆ ನೂರರಷ್ಟು ಸಾಮಥ್ರ್ಯದೊಂದಿಗೆ ಆಮ್ಲಜನಕ ಉತ್ಪಾದನೆ ಕೈಗೊಂಡಿದೆ.

ರಾಜಸ್ಥಾನ, ಕರ್ನಾಟಕ, ಬಿಹಾರ, ಒಡಿಶಾ ಮತ್ತು ಚಿತ್ತೀಸ್‍ಘಡದಲ್ಲಿರುವ ತನ್ನ ಆಮ್ಲಜನಕ ತಯಾರಿಕಾ ಘಟಕಗಳಿಂದ ದೇಶದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್ ನಿರಂತರವಾಗಿ ಪೂರೈಕೆ ಮಾಡುತ್ತಿದೆ. ಜತೆಗೆ ಎಲ್ಲಾ ಘಟಕಗಳಲ್ಲಿ ಉಚಿತವಾಗಿ ಆಮ್ಲಜನಕ ರೀಫಿಲ್ ಸೌಲಭ್ಯ ನೀಡುತ್ತಿದೆ.

ಕೋವಿಡ್‍ನ ಎರಡನೇ ಅಲೆಯ ಸೋಂಕು ಹರಡುತ್ತಿದೆ. ಇದರಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಆಮ್ಲಜನಕದ ಕೊರತೆಗೆ ಕಾರಣವಾಗಿದೆ. ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್‍ಗೆ ತಿರುಗಿ ಉಸಿರಾಟದಲ್ಲಿ ಗಂಭೀರ ಸಮಸ್ಯೆ ಉಂಟು ಮಾಡುತ್ತಿದೆ. ಇಂತಹ ರೋಗಿಗಳಿಗೆ ಆಮ್ಲಜನಕ ಅಗತ್ಯವಾಗಿದೆ. ಆದರೆ, ಇದರ ಕೊರತೆ ಎದುರಾಗಿದೆ. ಈ ನಿಟ್ಟಿನಲ್ಲಿ ಜನರ ಆರೋಗ್ಯ, ಸುರಕ್ಷತೆ ಕಾಪಾಡಲು ಹೆಜ್ಜೆ ಇಟ್ಟಿದೆ. ಉತ್ಪಾದನಾ ಘಟಕಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆ ಮಾಡಿ ಆಸ್ಪತ್ರೆಗಳಿಗೆ ಪೂರೈಸುತ್ತಿದೆ. ಮಾಸ್ಕ್‍ಗಳನ್ನು ಹೊಲಿಯುವುದಕ್ಕೆ ಹಳ್ಳಿಗಳ ಮಹಿಳೆಯರಿಗೆ ಪ್ರೋತ್ಸಾಹ ನೀಡಿದೆ. ಸುರಕ್ಷತಾ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಜಾಗೃತಿ ಮೂಡಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ನೆರವು, ಆಂಬ್ಯುಲೆನ್ಸ್ ಸೇರಿದಂತೆ ಇನ್ನಿತರೆ ಸೌಲಭ್ಯ ಒದಗಿಸುತ್ತಿದೆ.

ಶ್ರೀ ಸಿಮೆಂಟ್ ಭಾರತದ 10 ರಾಜ್ಯಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಯೂನಿಯನ್ ಸಿಮೆಂಟ್ ಕಂಪನಿ ರಾಸ್ ಎ1 ಖೈಮ್ಹಾ ಎಂಬ ಸಿಮೆಂಟ್ ಉತ್ಪಾದನಾ ಘಟಕ ಹೊಂದಿದೆ. ಆವಿಷ್ಕಾರಕ ತಂತ್ರಜ್ಞಾನಗಳ ಬಳಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವ ಮೂಲಕ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ ಮತ್ತು ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಕಂಪನಿ ಮತ್ತು ಕಟ್ಟಡ ನಿರ್ಮಾಣ ಉತ್ಪನ್ನ ತಯಾರಿಸುವ ಕಂಪನಿ ಎಂಬ ಪ್ರಶಸ್ತಿ ಪಡೆದುಕೊಂಡಿದೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.