ಕೋವಿಡ್ ಆಸ್ಪತ್ರಗೆ ಒತ್ತಾಯಿಸಿ ಪ್ರತಿಭಟನೆ

ಮಂಡ್ಯ:ಏ:21: ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಘೋಷಿಸಿರುವುದರಿಂದ ಕೋವಿಡ್‍ಯೇತರ ರೋಗಿಗಳಿಗೆ ಚಿಕಿತ್ಸೆ ದೊರೆಯುವುದು ದುಸ್ತರವಾಗಿದ್ದು ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಘೋಷಿಸುವಂತೆ ಕರುನಾಡ ಸೇವಕರು ಆಗ್ರಹಿಸಿದರು.
ಕಳೆದ ಸಾರಿಯು ಇದೇ ಮಾದರಿಲ್ಲಿ ಕಾಲೇಜು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಘೋಷಿಸಿದ ಪರಿಣಾಮ ಕೋವಿಡ್ ಯೇತರ ರೋಗಿಗಳು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಕ್ಕೆ ಪಡೆದು ಕೋವಿಡ್ ಚಿಕಿತ್ಸೆ ನೀಡುವುದರಿಂದ ಸಾಮಾನ್ಯ ಹಾಗೂ ಕೋವಿಡ್ ರೋಗಿಗಳು ಪರಸ್ಪರ ಒಟ್ಟುಗೂಡುವುದು ತಪ್ಪಿ ಸೋಂಕು ಹರಡುವಿಕೆಯ ಪ್ರಮಾಣ ತಗ್ಗಲಿದೆ. ಇದಲ್ಲದೆ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಕರುನಾಡ ಸೇವಕರು ಕಳೆದ ಎರಡು ವಾರಗಳಿಂದ ಅಧ್ಯಯನ ನಡೆಸಿ ಕಂಡುಕೊಂಡಂತೆ ಬಹುತೇಕ ವೈದ್ಯರಿಗೆ ಜಿಲ್ಲಾ ಕೇಂದ್ರದಲ್ಲಿ ವಸತಿ ಗೃಹ ನೀಡಿದ್ದರು ಜಿಲ್ಲಾ ಕೇಂದ್ರದಲ್ಲಿ ವಾಸಿಸದೆ ದೂರದ ಬೆಂಗಳೂರು ಮೈಸೂರಿನಿಂದ ಆಗಮಿಸುತ್ತಿದ್ದಾರೆ.ಇದಲ್ಲದೆ ಕೆಲ ವೈದ್ಯರು ಖಾಸಗಿ ಪ್ರಾಕ್ಟೀಸ್ ಸಲುವಾಗಿ ಆಸ್ಪತ್ರೆಯ ಚಿಕಿತ್ಸೆಯಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ.ಈ ವೈದ್ಯರನ್ನು ನಿಯಂತ್ರಿಸುವಲ್ಲಿ ಕಾಲೇಜಿನ ನಿರ್ದೇಶಕರು ಅಸಹಾಯಕರಾಗಿದ್ದಾರೆ. ಆದ ಕಾರಣ ಕೋವಿಡ್ ಅಂತ್ಯದವರೆಗೆ ಮಂಡ್ಯ ಜಿಲ್ಲಾಧಿಕಾರಿಗಳೆ ಮಿಮ್ಸ್ ಉಸ್ತುವಾರಿ ವಹಿಸುವಂತೆ ಆದೇಶ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ.
ಕೋವಿಡ್ ನಿಯಂತ್ರಣ ಸಂಬಂದ ಜಿಲ್ಲಾಸ್ಪತ್ರೆಯಲ್ಲಿ ಸೋಂಕು ನಿವಾರಣೆ ಸಂಬಂದ ಕೋವಿಡ್ ಸಮರ ಕೇಂದ್ರ (ವಾರ್ ರೂಂ)ಸ್ಥಾಪಿಸಬೇಕು ಇದರಿಂದ ರೋಗಿಗಳು ಪರದಾಡುವುದು ತಪ್ಪಲಿದೆ.ಹಾಗೇಯೆ ನೂತನ ಹೆರಿಗೆ ಆಸ್ಪತ್ರೆಯನ್ನು ನಗರದಿಂದ ಹತ್ತು ಕೀಮಿ ದೂರದಲ್ಲಿ ನಿರ್ಮಿಸುವ ಕ್ರಮ ಅವೈಜ್ಞಾನಿಕ ವಾಗಿದೆ.ಸಾಕಷ್ಟು ಬಸ್ ರೇಲು ಪ್ರಯಾಣಕ್ಕೆ ಅವಕಾಶವಿರುವ ಮಂಡ್ಯ ನಗರದಿಂದ ಹೊರಭಾಗದಲ್ಲಿ ಆಸ್ಪತ್ರೆ ನಿರ್ಮಿಸುವುದರಿಂದ ಸಾಕಷ್ಟು ಅನಾನುಕೂಲವಾಗಲಿದೆ.ಸದ್ಯದಲ್ಲೆ ತಮಿಳು ಕಾಲೋನಿಯ 13ಎಕರೆ ಭೂಮಿ ಮೆಡಿಕಲ್ ಕಾಲೇಜು ಸುಪರ್ದಿಗೆ ಬರುವುದರಿಂದ ಅಲ್ಲಿಯೆ ಸಾಕಷ್ಟು ಆಸ್ಪತ್ರೆ ಕಟ್ಟಡ ನಿರ್ಮಿಸಲು ಕ್ರಮವಹಿಸಬೇಕು.
ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ. ಅಭೀಗೌಡ.ನಗರಾಧ್ಯಕ್ಷ ಎಂ.ಚಂದ್ರು.ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷರಾದ ವೆಂಕಟೇಶ್. ಬಾಬು.ಗೋವಿಂದ ಮದ್ದೂರು ಶ್ರೀನಿವಾಸ್. ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಚಂದ್ರು ಸೇರಿದಂತೆ ಹಲವರಿದ್ದರು.
ಮನವಿ ಸ್ವೀಕರಿಸಿದ ಮಿಮ್ಸ್ ನಿರ್ದೇಶಕ ಡಾ.ಹರೀಶ್ ಹಣಕಾಸು ಅಕ್ರಮ ಎಸಗಿದ ಮಿಮ್ಸ್ ನೌಕರರಾದ ಶಶಿಕಲಾ.ಕಚೇರಿ ಅಧೀಕ್ಷಕ ರಾಜೂಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಉಳಿದಂತೆ ಕೋವಿಡ್ ವಾರ್ ಕೇಂದ್ರ ಸೇರಿದಂತೆ ವೈದ್ಯರು ಜಿಲ್ಲಾ ಕೇಂದ್ರದಲ್ಲಿ ಉಳಿದು ಕೆಲಸ ನಿರ್ವಹಿಸುವ ಸಂಬಂದ ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು.