ಕೋವಿಡ್ ಆರೋಗ್ಯ ಕೇಂದ್ರಕ್ಕೆ ಝೀರಾ ಕನ್ವೆನ್ಷನ್ ಹಾಲ್

ಬೀದರ:ಎ.27: ಗುರುದ್ವಾರ ಶ್ರೀ ನಾನಕ ಝೀರಾ ಸಾಹೇಬ್ ಪ್ರಬಂಧಕ ಕಮಿಟಿಯು ಕೋವಿಡ್ ಕೇರ್ ಸೆಂಟರ್‌ಗಾಗಿ ಇಲ್ಲಿಯ ಝೀರಾ ಕನ್ವೆನ್ಶನ್ ಹಾಲ್‍ನ್ನು ಜಿಲ್ಲಾ ಆಡಳಿತಕ್ಕೆ ನೀಡಿದೆ.

ಸೆಂಟರ್ ಒಟ್ಟು 200 ಹಾಸಿಗೆಗಳ ಸೌಲಭ್ಯ ಒಳಗೊಂಡಿದೆ ಎಂದು ಗುರುದ್ವಾರ ಶ್ರೀ ನಾನಕ ಝೀರಾ ಸಾಹೇಬ್ ಪ್ರಬಂಧಕ ಕಮಿಟಿಯ ಅಧ್ಯಕ್ಷ ಎಸ್. ಬಲಬೀರ್‌ಸಿಂಗ್ ತಿಳಿಸಿದ್ದಾರೆ.

ಕೋವಿಡ್‍ನ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯ ಜನರ ರಕ್ಷಣೆಗೆ ಜಿಲ್ಲಾ ಆಡಳಿತ ಸರ್ವ ಪ್ರಯತ್ನ ನಡೆಸುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.