ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚುವುದು ಸರಿಯಲ್ಲ

ಮೈಸೂರು,ಮೇ.20: ಮೈಸೂರಿನಲ್ಲಿ ದಿಢೀರ್ 16 ಕೋವಿಡ್ ಕೇರ್ ಮುಚ್ಚಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಶಾಸಕ ಸಾ.ರಾ.ಮಹೇಶ್ ಒಂದು ಕೋವಿಡ್ ಕೇರ್ ಕೇಂದ್ರದಲ್ಲಿ ಅವ್ಯವಸ್ಥೆ ಇದ್ದರೆ ಎಲ್ಲಾ ಕೇಂದ್ರ ಮುಚ್ಚುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅವರು ಇಂದು ಬೆಳಿಗ್ಗೆ ಮೈಸೂರಿನ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಎಸ್.ಎ. ರಾಮದಾಸ್, ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಅವರೇ ಈ ರೀತಿ ಆದೇಶ ಮಾಡಿಸಿದರೆ ಹೇಗೆ? ಕೋವಿಡ್ ಕೇರ್ ಸೆಂಟರ್ ಗೆ ಶಾಸಕ ರಾಮದಾಸ್ ಹೋದಾಗ ಒಂದೆರಡಲ್ಲಿ ಅವ್ಯವಸ್ಥೆ ಇರಬಹುದು. ಎಸ್.ಎ. ರಾಮದಾಸ್ ಒಂದು ಕ್ಷೇತ್ರದ ಶಾಸಕರು. ಅವರು ಹೇಗೆ ಇಡೀ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ ಅನ್ನು ಬಂದ್ ಮಾಡಿಸುತ್ತಾರೆ? ರಾಮದಾಸ್ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲದ ವಿಚಾರದಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಬಂದ್ ಆದೇಶ ಮಾಡಿಸಿದವರಿಗೆ ಸಾಮಾನ್ಯ ಜ್ಞಾನ ವೂ ಇಲ್ಲವಾ ಎಂದು ಶಾಸಕ ಎಸ್.ಎ. ರಾಮದಾಸ್ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್ ಸಂಬಂಧಿತ ಮಾತ್ರೆಗಳನ್ನು ನಮ್ಮ ಕ್ಷೇತ್ರಕ್ಕೆ ಕಳುಹಿಸಿಯೇ ಇಲ್ಲ. ಜಿಲ್ಲಾ ಉಸ್ತುವಾರಿ ಎಸ್.ಟಿ. ಸೋಮಶೇಖರ್, ಎಸ್.ಎ. ರಾಮದಾಸ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯೋಜಿಸಿದ್ದರಾ? ಒಬ್ಬ ಶಾಸಕರ ಮಾತು ಕೇಳಿ ಜಿಲ್ಲಾಡಳಿತ ಹೇಗೆ ಇಡೀ ಜಿಲ್ಲೆಗೆ ಆದೇಶ ಅನ್ವಯ ಮಾಡಿತು. ರಾಮದಾಸ್ ಯಾವ ಅಧಿಕಾರದ ಅಡಿ ಈ ಸಭೆ ಮಾಡಿ ಆದೇಶ ಮಾಡಿಸಲಾಗಿದೆ ಎಂದು ಪ್ರಶ್ನಿಸಿದರು.
ಯಾರು ವಸೂಲಿ ಮಾಡುತ್ತಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಎಲ್ಲರಿಗೂ ಒಂದೆ ತರ ಆಗಿಬಿಟ್ಟರೆ ರೋಗಿಗಳ ಪರಿಸ್ಥಿತಿ ಏನು? ಅದಕ್ಕೆ ಪತ್ಯೇಕವಾಗಿ ಪರ್ಯಾಯ ವ್ಯವಸ್ಥೆ ಮಾಡಿದ್ದೀರಾ? ವಸೂಲಾತಿ ನಡೆಯುತ್ತಿರಬಹುದು, ಆದರೆ ಜೀವ ಉಳಿಯುತ್ತಿದೆಯಲ್ಲ. ಯಾರ್ಯಾರು ಎಷ್ಟೆಷ್ಟು ದುಡ್ಡು ಕಟ್ಟಿದ್ದೀರಿ, ಏನೇನು ಅಂತ ಕೋವಿಡ್ ಮುಗಿದ ಮೇಲೆ ಜನರಿಂದ ಅಬ್ಜೆಕ್ಷನ್ ಕಾಲ್ ಮಾಡಿ ಯಾರ್ಯಾರು ಹೆಚ್ಚು ಹಣ ಕೊಟ್ಟಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಿ, ಈಗ ಜೀವ ಉಳಿಸಿ, ನೀವೇ ಮಾಡಿದ್ದೀರಲ್ಲ,ತ್ರಿ ಸ್ಟಾರ್, 5ಸ್ಟಾರ್, 2ಸ್ಟಾರ ಅಂತ ಕಾನೂನು, ಅದರಡಿಯಲ್ಲಿ ಅವರು ಮಾಡುತ್ತಿದ್ದಾರೆ. ಇದನ್ನು ದಯವಿಟ್ಟು ಮುಖ್ಯಮಂತ್ರಿಗಳು ಮೈಸೂರನ್ನು ಗಮನಿಸಿ, ಇಡೀರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಮೈಸೂರು ಕೂಡ ದೊಡ್ಡ ಜಿಲ್ಲೆ. ಈ ತರ ಆದೇಶಗಳನ್ನು ಕೊಟ್ಟರೆ ಮಾಡುವಂತಹವರು ಏನು ಮಾಡಬೇಕು, ನೀವೆಳಿದ್ದನ್ನು ಇಲ್ಲ ಅಂತ ಹೇಳುತ್ತಿಲ್ಲ. ಯಾವುದೋ ಒಂದು ಕಡೆ ಹೋಟೆಲ್ ನಲ್ಲಿಟ್ಟುಕೊಂಡು ದೊಡ್ಡ ದಂದೆ ಮಾಡುತ್ತಿದ್ದಾರೆ, ನಾನೆ ಹೇಳಿದ್ನಲ್ಲ, ಇಲ್ಲ ಅನ್ನುತ್ತಿಲ್ಲ. ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದರು.
ಡಿಸಿಎಂ ಬರ್ತಾರೆ ಭೇಟಿ ಆಗ್ತೀರಾ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾನು ಯಾರನ್ನೂ ಭೇಟಿ ಮಾಡಲ್ಲ ಎಂದರು.
ಜಿಲ್ಲಾಧಿಕಾರಿ ಅಂದರೆ ಏನು? ನಗರದಲ್ಲಿ ಅವರಿಗೆ ಕೆಲಸವೇ ಇಲ್ಲ, ನಗರದಲ್ಲಿ ಕೆಲಸ ಮಾಡಲು ಪಾಲಿಕೆಯ ಆಯುಕ್ತರಿದ್ದಾರೆ. ಅವರಿಗಿರೋದೆ ಕೆಲಸ ಹಳ್ಳಿಗಳಲ್ಲಿ, ಇಲ್ಲದಿದ್ದಲ್ಲಿ ನಗರ ಆಯುಕ್ತರು ಅಂತ ಮಾಡುತ್ತಿದ್ದರು, ಜಿಲ್ಲಾಧಿಕಾರಿ ಅಂತ ಮಾಡಿರೋದೆ ಹಳ್ಳಿಗಳಿಗೆ ಹೋಗಬೇಕು ಅಂತ. ಅದನ್ನು ಬೇರೆ ಸಮಯದಲ್ಲಿ ಮಾತಾಡೋಣ ಎಂದರು.
ಯಾವುದು ಕಾನೂನು ಬಾಹಿರವಾಗಿದೆ ಅವರ ಮೇಲೆ ಕ್ರಮ ತೆಗೆದುಕೊಳ್ಳಿ, ಇದು ಸಮಯವಲ್ಲ, ಒಂದು ಜೀವದ ಪ್ರಶ್ನೆ. ಶಾಸಕರ ಅಧ್ಯಕ್ಷತೆಯಲ್ಲಿ ನಿರ್ಧಾರ ಹೆಂಗ ಆಯಿತು, ನಂತರ ಇವರು ಹೇಗೆ ಮೌಖಿಕ ಆದೇಶ ಕೊಟ್ಟರು, ಮುಖ್ಯಮಂತ್ರಿಗಳು ಎಕ್ಸ್ಟ್ರಾ ಪವರ್ ಕೊಟ್ಟಿದ್ದಾರಾ? ನಾನು ಇಲ್ಲಿ ಕುಳಿತುಕೊಂಡು ಡಿಹೆಚ್ ಒಗೆ ಹೇಳಿ ಓಪನ್ ಮಾಡಿ ಅಂತ ಮಾಡಿಸಬಹುದಾ ಎಂದು ಪ್ರಶ್ನಿಸಿದರು.
ಈ ಸಮಯದಲ್ಲಿ ಕಠಿಣವಾದ ತೀರ್ಮಾನ ಬೇಡ. ತಪ್ಪು ಮಾಡಿದವರಿಗೆ ಮಾತ್ರ ಈ ಕ್ರಮ ಆಗಲಿ. ಆದರೆ ಎಲ್ಲ 16 ಕೋವಿಡ್ ಸೆಂಟರ್ ರದ್ದು ಮಾಡಿರೋದು ಸರಿಯಲ್ಲ. ಕಮಿಟಿ ರೆಡಿಯಾಗಿದೆ ಅವರಿಂದ ತನಿಖೆ ಆಗಲಿ. ಸಮಸ್ಯೆ ಮಾಡಿದವರಿಗೆ ಒಂದು ಛಾನ್ಸ್ ಕೊಡಿ. ತಪ್ಪು ತಿದ್ದುಕೊಳ್ಳದಿದ್ದರೆ ಅವರ ಮೇಲೆ ನಂತರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.