ಕೋವಿಡ್ ಆಪ್ತ ಸಲಹೆ: ಆನ್‍ಲೈನ್ ತರಬೇತಿ ಕಾರ್ಯಾಗಾರ

ಕಲಬುರಗಿ,ಜೂ.10: ಜೂ. 21ರಿಂದ 30ರವರೆಗೆ ದಿನಂಪ್ರತಿ ಎರಡೂವರೆ ಗಂಟೆಗಳ ಕಾಲಾವಧಿಯ ಒಟ್ಟು 25 ಗಂಟೆಗಳ ಹತ್ತು ದಿನಗಳ ಕೋವಿಡ್ ಆಪ್ತ ಸಲಹೆ ಎಂಬ ವಿಶೇಷ ಆನ್‍ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಯೋಜಕ ಡಾ. ಶಶಿಶೇಖರರೆಡ್ಡಿ ಅವರು ತಿಳಿಸಿದ್ದಾರೆ.
ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಒಟ್ಟು ಹತ್ತು ವಿಷಯ ಪರಿಣಿತರು ತರಬೇತಿ ನೀಡುವರು. 18 ವರ್ಷ ಮೇಲ್ಪಟ್ಟು ಓದು, ಬರಹ ಬಲ್ಲ ಮತ್ತು ಸಾಮಾಜಿಕ ಕಳಕಳಿ ಹೊಂಧಿರುವ ರಾಷ್ಟ್ರದ ಯಾವುದೇ ಭಾಗದಲ್ಲಿರುವ ಕನ್ನಡಿಗರು ಕೋವಿಡ್ ಕೌನ್ಸಿಲಿಂಗ್ ತರಬೇತಿಗೆ ಪ್ರವೇಶ ಪಡೆಯಬಹುದು. ಮೊದಲನೇ ನೊಂದಾಯಿತ 75 ಆಸಕ್ತರಿಗೆ ಅವಕಾಶವಿದೆ. ನೊಂದಣಿ ಶುಲ್ಕ 500ರೂ.ಗಳು ಮಾತ್ರ. ತರಬೇತಿ ಕಾರ್ಯಾಗಾರ ಕನ್ನಡ ಮಾಧ್ಯಮದಲ್ಲಿ ಇರುತ್ತದೆ. ಪ್ರತಿ ದಿನ ಸಂಜೆ 5ರಿಂದ ಏಳುವರೆಯವರೆಗೆ ತರಬೇತಿ ನೀಡಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಆಸಕ್ತರು, ನೊಂದಣಿಗೆ ತರಬೇತಿ ಕಾರ್ಯಾಗಾರದ ಸಂಯೋಜಕ ಡಾ. ಶಶಿಶೇಖರರೆಡ್ಡಿ ಅವರನ್ನು ಅವರ ವಾಟ್ಸಪ್ 9448651961ಕ್ಕೆ ಸಂಪರ್ಕಿಸಿ, ಗೂಗಲ್ ಫಾರ್ಮ ತುಂಬಿ 500ರೂ.ಗಳ ಶುಲ್ಕದೊಂದಿಗೆ ಪ್ರವೇಶ ಪಡೆಯಬಹುದು. ಜೂನ್ 18ರೊಳಗೆ ನೊಂದಣಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಯಶಸ್ವಿಯಾಗಿ ತರಬೇತಿ ಪೂರೈಸಿದವರಿಗೆ ನಾಲ್ಕುನೂರು ರೂ.ಗಳ ಮೌಲ್ಯದ ಆಪ್ತಸಲಹಾ ಸಂಬಂಧಿತ ಪುಸ್ತಕಗಳನ್ನು ಒದಗಿಸಲಾಗುವುದು ಮತ್ತು ಪ್ರಮಾಣಪತ್ರ ನೀಡಲಾಗುವುದು. ಬೆಂಗಳೂರಿನ ಸಮಾಧಾನ ಆಪ್ತ ಸಲಹಾ ಕೇಂದ್ರ, ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆ, ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕೋವಿಡ್‍ಗೆ ಸಂಬಂಧಿತ ಹವ್ಯಾಸಿ ಆಪ್ತ ಸಮಾಲೋಚನಾ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.