ಕೋವಿಡ್ ಆತಂಕದಲ್ಲೂ ಗೃಹ ಪ್ರವೇಶ, ಗೃಹ ನಿರ್ಮಾಣಕ್ಕೆ ಚಾಲನೆ

ಬಳ್ಳಾರಿ ಮೇ 14 : ಕೋವಿಡ್ ನ ಎರಡನೇ ಅಲೆಯ ಆತಂಕದ ನಡುವೆಯೇ ಇಂದು ನಗರ ಮತ್ತು ಜಿಲ್ಲೆಯ ಬಹುತೇಕ ಕಡೆ ಗೃಹ ಪ್ರವೇಶ ಮತ್ತು ಹೊಸ ಮನೆಗಳ‌ ನಿರ್ಮಾಣಕ್ಕೆ ಭೂಮಿ‌ಪೂಜೆ ಕಾರ್ಯಕ್ರಮಗಳು ನಡೆದವು.
ಕೋವಿಡ್ ಸೋಂಕು ವಿಸ್ತರಣೆಯಾಗುತ್ತಿರುವುದರಿಂದ ಅದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕಠಿಣ ಲಾಕ್ ಡೌನ್ ಜಾರಿಗೆ ತಂದು ವಿವಾಹ ಸೇರಿದಂತೆ ಎಲ್ಲಾ ರೀತಿಯ ಸಮಾರಂಭಗಳನ್ನು ರದ್ದು‌ ಮಾಡಿದ್ದರೂ. ಇಂದು ಅಕ್ಷಯ ತೃತೀಯದಂತಹ ಉತ್ತಮ‌ ಮಹೂರ್ತದ ಹಿನ್ನಲೆಯಲ್ಲಿ ಗೃಹ ಪ್ರವೇಶ ಮೊದಲಾದ ಕಾರ್ಯಕ್ರಮಗಳು ನಡೆದವು.
ಚಿನ್ನ ಖರೀದಿದಾರರಿಗೆ ನಿರಾಸೆ:

ಅಕ್ಷಯ ತೃತೀಯ ದಿನವಾದ ಇಂದು ಚಿನ್ನ ಖರೀದಿ ಮಾಡಿದರೆ ಹೆಚ್ಚು ಹೆಚ್ಚು ಚಿನ್ನ ಖರೀದಿ ಮಾಡಲು ದೇವರು ಐಶ್ವರ್ಯವನ್ನು ನೀಡುತ್ತಾನೆ ಎಂಬ ನಂಬಿಕೆ
ಈ‌ ಹಿನ್ನಲೆಯಲ್ಲಿ ಇಂದಿನ‌ ದಿನ ಸಾಮಾನ್ಯವಾಗಿ ಚಿನ್ನದಾಭರಣ ಅಂಗಡಿಗಳು ತುಂಬಿ ತುಳುಕುತ್ತಿದ್ದವು. ಬಡವರಾದರೂ ಸಹ ಕನಿಷ್ಟ ಸಾವಿರ ಬೆಲೆಯಷ್ಟಾದರೂ ಖರೀದಿ‌ಮಾಡುತ್ತಿದ್ದರು.
ಆದರೆ ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಚಿನ್ನಾಭರಣದ ಅಂಗಡಿಗಳು ಬಂದ್ ಆಗಿರುವುದರಿಂದ ಇಂದು ಚಿನ್ನ‌ ಖರೀದಿ ಮಾಡಬೇಕೆಂದವರಿಗೆ ನಿರಾಸೆಯಾಗಿದೆ.