ಕೋವಿಡ್ ಅಂತ್ಯಕ್ರಿಯೆ, ರೋಗಿಗಳ ಪರಿಚಾರಕರಿಗೆ ಆಹಾರ ವಿತರಣೆಗೆ ಅವಕಾಶ ನೀಡಿ ಮನವಿ

ವಿಜಯಪುರ, ಮೇ.2-ಗಜಾನನ ಉತ್ಸವ ಮಹಾಮಂಡಳ ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ರೋಗಿಗಳ ಪರಿಚಾರಿಕರಿಗೆ ಆಹಾರ ವಿತರಣೆ ಹಾಗೂ ಮೃತದೇಹದ ಅಂತ್ಯಕ್ರಿಯೆ ವ್ಯವಸ್ಥೆ ಮಾಡಲು ಅವಕಾಶ ಕೊಡಬೇಕು ಎಂದು ಮನವಿ ಸಲ್ಲಿಸಿದರು.
ವಿಜಯಪುರ ನಗರದ ನಾಗರಿಕರ ಹಿತದೃಷ್ಟಿಯಿಂದ ನಾವು 2 ತಂಡಗಳನ್ನು ರಚಿಸಿದ್ದೇವೆ. ಅದರಲ್ಲಿ ಅಂತ್ಯಕ್ರಿಯೆ, ರೋಗಿಗಳ ಪರಿಚಾರಿಕರಿಗೆ ಆಹಾರ ವಿತರಣೆ. ಈ ಎರಡು ಕಾರ್ಯಗಳನ್ನು ನಿರ್ವಹಿಸಲು ಸ್ವ ಇಚ್ಛೆಯಿಂದ ನಮ್ಮ ಕಾರ್ಯಕರ್ತರು ಜಿಲ್ಲಾಡಳಿತದ ಸಂಯೋಗದೊಂದಿಗೆ ಕೋವಿಡ್- 19 ರೋಗದಿಂದ ತುತ್ತಾಗಿ ಮೃತ ಹೊಂದಿದ ನಿರ್ಗತಿಕ ಮೃತದೇಹದ ಅಂತ್ಯಕ್ರಿಯೆ ವ್ಯವಸ್ಥೆಯನ್ನು ಮಾಡಲಾಗುವದು. ಜೊತೆಗೆ ಆಸ್ಪತ್ರೆಯಲ್ಲಿರುವ ಬಡ ಕೋವಿಡ್ ರೋಗಿಗಳ ಪರಿಚಾರಿಕರಿಗೆ ಉಚಿತ ಆಹಾರ ವಿತರಣೆ ಮಾಡಲಾಗುತ್ತದೆ. ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ನಮಗೆ ಸಾಮಾಜಿಕ ಅಂತ್ಯಕ್ರಿಯೆ, ರೋಗಿಗಳ ಪರಿಚಾರಿಕರಿಗೆ ಆಹಾರ ವಿತರಣೆ ಸೇವೆಯನ್ನು ಸಲ್ಲಿಸಲು ಅನುಮತಿ ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸತೀಶ ಪಾಟೀಲ್, ಸನ್ನಿ ಗವಿಮಠ, ಭರತ್ ಕೋಳಿ,ಪ್ರಭಾಕರ್ ಭೋಸ್ಲೆ, ಬಸಯ್ಯ ಗೋಳಸಂಗಿಮಠ, ಗಣೇಶ ಹಜೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.