ಕೋವಿಡ್‍ನ 2 ಡೋಸ್ ಲಸಿಕೆ ನೀಡಿರುವುದರಲ್ಲಿ ವಿಜಯಪುರ ಜಿಲ್ಲೆಗೆ ಅಗ್ರಸ್ಥಾನ

ವಿಜಯಪುರ, ಡಿ.7-ಜಿಲ್ಲೆಯಲ್ಲಿ ಅರ್ಹ ವಯಸ್ಕರಿಗೆ ಕೋವಿಡ್‍ನ 2 ಡೋಸ್ ಲಸಿಕೆ ನೀಡಿರುವುದರಲ್ಲಿ ವಿಜಯಪುರ ತನ್ನ ನೆರೆಯ ಜಿಲ್ಲೆಗಳಿಗಿಂತ ಮುಂಚೂಣಿಯಲ್ಲಿದೆ. ಈಗಾಗಲೇ 16,25,924 ವಯಸ್ಕರಿಗೆ ಶೇ 100% ರಷ್ಟು ಮೊದಲನೇ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಅದರಂತೆ ಇಲ್ಲಿವರೆಗೆ 1ನೇ ಡೋಸ್ ಪಡೆಯದೇ ಇರುವ ಅರ್ಹ ಫಲಾನುಭವಿಗಳು ಕೂಡಾ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಅದರಂತೆ 2ನೇ ಡೋಸ್ 10,16,225 ಕ್ಕಿಂತ ಹೆಚ್ಚು ವಯಸ್ಕರಿಗೆ ಶೇ 62% ರಷ್ಟು ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ.
ಹಾಗೇ ಉಳಿದ 2ನೇ ಡೋಸ್ ಪಡೆಯದೇ ಇರುವ ಅರ್ಹ ಫಲಾನುಭವಿಗಳು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಮತ್ತು ಕೊರೋನಾ 3ನೇ ಅಲೆ ಜಿಲ್ಲೆಯಲ್ಲಿ ಬರದ ಹಾಗೇ ಜಾಗೃತಿ ವಹಿಸಬೇಕಾಗಿದೆ. ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಮತ್ತು ಶಾಲಾ ಕಾಲೇಜುಗಳ ಪೋಷಕರಿಗೆ 02 ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.
ಕೋವಿಡ್ ಲಸಿಕೆಯು ಸೊಂಕಿನ ಹರಡುವಿಕೆ ಹಾಗೂ ಕಾಯಿಲೆಯ ತೀವ್ರತೆ ತಡೆಯಲು ಸಹಕಾರಿಯಾಗಿದೆ. ಆದ್ದರಿಂದ ಎಲ್ಲರೂ ಆದಷ್ಟು ಬೇಗ 02 ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.