ಕೋವಿಡ್‍ನಿಂದ ಮೃತಪಟ್ಟವರಿಗೆ ಉಚಿತ ಅಂತ್ಯಸಂಸ್ಕಾರ

ಮುದ್ದೇಬಿಹಾಳ;ಮೇ.5: ಕೋವಿಡ್ 19 ಸೋಂಕಿನಿಂದ ಮೃತಪಟ್ಟರೇ ಅವರ ಶವ ಸಾಗಿಸಲು ಖಾಸಗಿ ವಾಹನಗಳು 8ರಿಂದ ಹತ್ತು ಸಾವಿರ ಕೇಳಳಾಗುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ ಈ ನಿಟ್ಟಿನಲ್ಲಿ ಕೋವಿಡ್ ಸೊಂಕಿನಿಂದ ಮೃತಪಟ್ಟ ಶವವನ್ನು ಕುಟುಂಭಸ್ಥರು ಅಂತ್ಯ ಸಂಸ್ಕಾರ ಮಾಡಲು ಯಾವೂದೇ ಒಂದು ನೈಯಾ ಪೈಸೆ ಹಣ ನೀಡುವ ಅವಶ್ಯಕತೆ ಇಲ್ಲ ಪುರಸಭೆಗೆ ತಿಳಿಸಿದರೆ ಪುರಸಭೆ ಮುಕ್ತಿವಾಹದ ಮೂಲಕ ಶವವನ್ನು ಅಂತ್ಯಸಂಸ್ಕಾರ ಮಾಡಲಾಗುವುದು ಹಾಗೊಂದು ವೇಳೆ ಯಾರಾದರೂ ಹಣ ಕೇಳಿದರೇ ನನ್ನ ಸಂಪರ್ಕಿಸಿ ಎಂದು ಮುಖ್ಯಾಧಿಕಾರಿ ಗೋಪಾಲ ಕಾಸೆ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣದಲ್ಲಿ ಕೋವಿಡ್19 ಸೋಂಕಿತರಾಗಿ ಮೃತಪಟ್ಟರೇ ಅವರ ಶವ ಸಾಗಿಸಲು ಅವರ ಅಂತ್ಯ ಸಂಸ್ಕಾರಕ್ಕೆ ಪುರಸಭೆಯ ಮುಕ್ತಿವಾಹನ ಉಚಿತವಾಗಿ ನೀಡಲಾಗುತ್ತದೆ ,ಕಳೆದ ನಾಲ್ಕು ದಿನಗಳ ಹಿಂದೆ ವಿಜಯಪುರ ಜಿಲ್ಲಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ಕೋವಿಡ್ ನಿಂದ ಮೃತಪಟ್ಟ ಜನರ ಶವ ಸಾಗಿಸಲು ಪುರಸಭೆ ಮುಕ್ತಿವಾಹನ ಸೇವೆ ಗೆ ಬಳಸಬೇಕು ಮತ್ತು ನಮ್ಮ ಪುರಸಭೆಯ 4 ಸಿಬ್ಬಂದಿಗಳು ಅಂತ್ಯಸಂಸ್ಕಾರ ಕ್ಕೆ ಪಿಪಿಇ ಕಿಟ್ ಧರಸಿ ಅಂತ್ಯಸಂಸ್ಕಾರ ಮಾಡುತ್ತಾರೆ ಮೃತಪಟ್ಟ ಕುಟುಂಬದ 3 ರಿಂದ 4 ಜನರು ಪಿಪಿಇ ಕಿಟ್ ಧರಸಿ ಅಂತ್ಯಸಂಸ್ಕಾರಲ್ಲಿ ಪಾಲ್ಗೊಳ್ಳಬಹುದು

ಕೋವಿಡ್ ನಿಂದ ಮೃತಪಟ್ಟ ಶವ ಸಾಗಣೆ ನಂತರ ವಾಹನ ಸ್ಯಾನಿಟೇಸರ್ ಮಾಡುತ್ತೇವೆ, ಕೋವಿಡ್ ಸೋಂಕಿತ ರಾಗಿ ಮೃತಪಟ್ಟರೆ ಆ ಕುಟುಂಬದ ಸದಸ್ಯರು ಪುರಸಭೆ ಗೆ ಅರ್ಜಿ ಬರೆದು ನೀಡಬೇಕು ಈಗಾಗಲೇ ಪಟ್ಟಣದಲ್ಲಿ ದನದಿನಕ್ಕೆ ಕೋವಿಡ್ ಸೊಂಕಿತರ ಸಂಖ್ಯೆ ಗಣನಿಯವಾಗಿ ಏರಿಕೆಗೊಳ್ಳುತ್ತಿರುವುದರಿಂದ ಪಟ್ಟಣದ ಬಹುತೇಕ ಎಲ್ಲ ವಾರ್ಡುಗಳಲ್ಲಿ ಪ್ರತಿ ಮನೆ ಮನೆಗೂ ಪುರಸಭೆ ವತಿಯಿಂದ ಸ್ಯಾನಿಟೈಜರ್ ಸಿಂಪಡಣೆ ಮಾಡಲಾಗುತ್ತಿದೆ ಜತೆಗೆ ರೋಗ ನಿರೋಧಕ ಶಕ್ತಿಯುಳ್ಳ ಬ್ಲೀಚಿಂಗ್ ಪೌಡರ್ ಹಾಕುವ ಮೂಲಕ ಇನ್ನು ಅನೇಕ ರೀತಿಯಲ್ಲಿ ಸೊಂಕು ಹರದಂತೆ ಮುಂಜಾಗೃತ ಕ್ರಮ ಕೈಗೊಒಳ್ಳಲಾಗುತ್ತಿದೆ ಎಂದರು.