ಕೋವಿಡ್‍ನಿಂದ ಮನೆಯಲ್ಲಿ ಉಳಿದ ಸಿಬ್ಬಂದಿಗೂ ವೇತನ

ಸಂಡೂರು ಜ 6 : ಕೋವಿಡ್ ಮಹಾಮಾರಿ ಹೆಮ್ಮಾರಿ ರೋಗದಂತೆ ಕಾಣಿಸಿಕೊಂಡಿದ್ದು ಕೋವಿಡ್‍ನಿಂದ 56 ದಿನಗಳ ಕಾಲ ಮನೆಯಲ್ಲರು ಅಡುಗೆ ಮಾಡುವವರಲ್ಲದೆ ಇತರೆ ಸಿಬ್ಬಂದಿವರಿಗೂ ಸರ್ಕಾರ ವೇತನ ನೀಡಿದೆ. ಜಿಲ್ಲಾ ಶಿಕ್ಷಣ ಕಾರ್ಯಾಲಯದ ಬಳ್ಳಾರಿ ಯವರು ಅಗಸ್ಟ್, ಸೆಪ್ಟಂಬರ್, ಅಕ್ಟೋಬರ್ 2020ರ ಒಟ್ಟು 55 ದಿನಗಳ ವರೆಗೆ 1ರಿಂದ 5ನೇ ತರಗತಿಯವರೆಗೆ ಪ್ರತಿ ಮಗುವಿಗೆ 4 ಕೆ.ಜಿ. ಅಕ್ಕಿ, ಪ್ರತಿ ಮಗುವಿಗೆ 800 ಗ್ರಾಮ ತೊಗರಿ ಬೇಳೆ, 1 ಕೆ.ಜಿ. 809 ಗ್ರಾಮ ಅಡುಗೆ ಎಣ್ಣೆ, 1 ಲೀಟರ್ ಅಡಿಗೆ ಉಪ್ಪು, 1 ಕೆ.ಜಿ. , 6 ರಿಂದ 8ನೇ ತರಗತಿಯ ಪ್ರತಿ ಮಗುವಿಗೆ 7 ಕೆ.ಜಿ. 50 ಗ್ರಾಂ. ಅಕ್ಕಿ, 1 ಕೆ.ಜಿ. ಗೋದಿ, 200 ಗ್ರಾಂ , 1 ಕೆ.ಜಿ. ತೊಗರಿ ಬೇಳೆ, 3 ಕೆ.ಜಿ. 397 ಅಡಿಗೆ ಎಣ್ಣೆ 1 ಲೀ. ಅಡಿಗೆ ಉಪ್ಪು 1 ಲೀ. 9 ರಿಂದ 10ನೇ ತರಗತಿ ವರೆಗೆ 8 ಕೆ.ಜಿ. 250 ಗ್ರಾಂ. ಅಕ್ಕಿ, ತೊಗರಿ ಬೇಳೆ 3 ಕೆ.ಜಿ. ಅಡಿಗೆ ಎಣ್ಣೆ, ಉಪ್ಪು ನೀಡಲಾಗುವುದು ಎಂದು ಅಕ್ಷರದಾಸೋಹ ಪ್ರಭಾರ ಅಧಿಕಾರಿ ಶಂಕರ್ ತಿಳಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಎಂ.ವೈ.ಘೋರ್ಪಡೆ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಇಲಾಖೆಯ ಮಾಹಿತಿ ನೀಡಿ ಮಾತನಾಡಿ ಪ್ರಸ್ತುತ ಅಡುಗೆಯನ್ನು ತಯಾರಿಸದೇ ಮಕ್ಕಳ ಕುಟುಂಬಕ್ಕೆ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದ್ದು ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಕೆ.ಅರ್. ಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಕೆ.ಅರ್. ಪ್ರಕಾಶ್ ಅವರು ಕೃಷಿ ಇಲಾಖೆಯ ಪ್ರಗತಿಯ ಬಗ್ಗೆ ಪ್ರಶ್ನಿಸಿದರು ಇದಕ್ಕೆ ಸಹಾಯಕ ನಿರ್ದೇಶಕ ಮಂಜುನಾಥ ರಡ್ಡಿ ಉತ್ತರಿಸಿ ಹಿಂಗಾರಿನಲ್ಲಿ 1170 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, 570ರಲ್ಲಿ ಭತ್ತ, ಹಾಗೂ ಶೇಂಗಾ ಅಚ್ಚಕಡ್ಲೆ ಬಿತ್ತನೆಯನ್ನು ಮಾಡಿದ್ದಾರೆ ಅಲ್ಲದೆ ವಿಮಾ ಸೌಲಭ್ಯ, ಲಿಂಕ್ ಮಾಡಿಸುವ ಬಗ್ಗೆ ಸಹ ಮಾಹಿತಿ ನೀಡಲಾಗಿದೆ ಎಂದರು.
ಶಿರಸ್ತೇದಾರ್ ಪ್ರಿಯಾದರ್ಶಿನಿ ಮಾತನಾಡಿ ಪೆನ್ಷನ್ ದಾರರಿಗೆ ಕಳೆದ 3ತಿಂಗಳು ಸ್ಥಗಿತಗೊಳಿಸಲಾಗಿತ್ತು ಈಗ ಅವರಿಗೆ ನೀಡುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ, ಅಲ್ಲದೆ ಎಲ್ಲರಿಗೂ ಸೂಕ್ತ ಮಾಹಿತಿ ನೀಡಿ ಪೆನ್ಷನ್ ಸಿಗುವಂತೆ ಮಾಡಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್ ಮಾತನಾಡಿ, ಶಾಲೆಗೆ ಬರುವ ಮಕ್ಕಳಿಗೆ ವಸತಿನಿಲಯದಲ್ಲಿ ವ್ಯವಸ್ಥೆ ಮಾಡುತ್ತಿದ್ದು ಅದರಲ್ಲೂ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಅಲ್ಲದೆ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಸಿಬ್ಬಂದಿ ವರ್ಗದವರಿಗೆ ಕೋವಿಡ್ ಪರೀಕ್ಷೆ ಮಾಡಿಸಿ ಕರ್ತವ್ಯಕ್ಕೆ ಹಾಜರಾಗಲು ತಿಳಿಸಲಾಗಿದೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಎಲ್ಲಾ ಕ್ರಮವಹಿಸಿದ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಹನುಮಂತನಾಯಕ ಮಾತನಾಡಿ 11 ಹಣ್ಣು ವ್ಯಾಪಾರಸ್ತ ಫಲಾನುಭವಿಗಳಿಗೆ 15 ಸಾವಿರ ರೂಪಾಯಿ ವೆಚ್ಚದಲ್ಲಿ ಬಂಡಿಗಳನ್ನು ನೀಡಲಾಗುವುದು ಅಲ್ಲದೆ ಬಾಳೆ, ದಾಳಿಂಬೆ, ಇತರ ಬೆಳೆಗಳ ಡ್ರಿಪ್ ವ್ಯವಸ್ಥೆ ಮಾಡಲಾಗುತ್ತಿದೆ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಪೂರ್ಣ ಮಾಹಿತಿಯನ್ನು ರೈತರಿಗೆ ತಿಳಿಸುತ್ತಿದ್ದೇವೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿಯೂ ಸಹ ಮಕ್ಕಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದ್ದು ಈಗಾಗಲೇ 9264 ಮಕ್ಕಳಿಗೆ ನೀಡಿದ್ದೇವೆ , ಗರ್ಭೀಣಿ, ಬಾಣಂತಿಯರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಶೇ: 100 ರಷ್ಟು ಒದಗಿಸಲಾಗಿದೆ ಎಂದು ಅಧಿಕಾರಿ ಶರಣಬಸವೇಶ್ವರಿ ತಿಳಿಸಿದರು.
ಸಮಾರಂಭದಲ್ಲಿ ಕುಡಿಯುವ ನೀರು, ಜಿಲ್ಲಾ ಪಂಚಾಯಿತಿ, ಅರಣ್ಯ, ಇಲಾಖೆಯ ಅಡಿಯಲ್ಲಿ ಹೆಚ್ಚು ನರೇಗಾ ಕಾಮಗಾರಿಗಳ ಜೊತೆಗೆ ಅನುದಾನ ಲ್ಯಾಪ್ಸ್ ಅಗದಂತೆ ಕ್ರಮವಹಿಸಲು ತಿಳಿಸಿದರು.
ಮೀನುಗಾರಿಕೆ ಸಹಾಯಕ ನಿರ್ದೇಶಕ ಬಸವನಗೌಡ ಅವರು ನೀತಿ ಸಂಹಿತೆ ಇದ್ದ ಸಂದರ್ಭದಲ್ಲಿಯೂ ಸಹ ಕೆರೆಗಳ ಟೆಂಡರ್ ಕರೆದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು, ಈ ಸಂದರ್ಭದಲ್ಲಿ ಪತ್ರಕರ್ತರಾದ ಅರಳಿಕುಮಾರಸ್ವಾಮಿಯವರು ವಿಷಯ ಪ್ರಸ್ತಾಪಿಸಿ ಮಾಹಿತಿ ನೀಡಲು ಕೋರಿದರು, ಇದಕ್ಕೆ ಕಾರ್ಯಾನಿರ್ವಾಹಕ ಅಧಿಕಾರಿ ಮದ್ಯ ಪ್ರವೇಶಿಸಿ ಈ ಬಗ್ಗೆ ತಹಶೀಲ್ದಾರ್ ಅವರಿಂದ ಪರವಾನಿಗೆ ಪಡೆದು, ಉನ್ನತಾಧಿಕಾರಿಗಳ ಗಮನಕ್ಕೆ ತಂದು ಈ ಪ್ರಕ್ರಿಯೆ ಮಾಡಲಾಗಿದೆ, ಅಲ್ಲದೆ ನೀತಿ ಸಂಹಿತೆ ಜಾರಿಗಿಂತ ಮೊದಲೆ ಪ್ರಕಟಣೆಯಾದ ಹಿನ್ನಲೆಯಲ್ಲಿ ಈ ಕಾರ್ಯ ಮಾಡಲಾಗಿದೆ ಎಂದರು.
ಸಭೆಯಲ್ಲಿ ಪಶುಸಂಗೋಪನಾ ಇಲಾಖೆಯ ಅಧಿಕಾರಿ ರಂಗಪ್ಪ, ವಿನಯ್, ಎಸ್ಟಿ ಕಾರ್ಪೂರೇಷನ್ ನಾರಾಯಣನಾಯಕ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ರಾಮಾಂಜಿನೇಯ, ಲೋಕೋಪಯೋಗಿ ಇಲಾಖೆಯ ಶಂಕರ್, ನೈರ್ಮಲ್ಯ ಅಧಿಕಾರಿ ಹನುಮಂತರಡ್ಡಿ ಡಾ. ಐಅರ್.ಅಕ್ಕಿ, ಅಧ್ಯಕ್ಷ ಫರ್ಜಾನ ಗೌಸ್ ಅಜಂ, ಇತರ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.