ಕೋವಿಡ್‍ನಿಂದ ಪಾರಾದ ಎಮ್.ಎಲ್.ಸಿ ಅರಳಿ

ಬೀದರ:ಎ.23: ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅವರು ಮೊನ್ನೆಯಷ್ಟೆ ಕೋವಿಡ್ ಬಾಯಿಂದ ಪಾರಾಗಿದ್ದಾರೆ.

ಬುಧವಾರ ಮಣಿಪಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತನ್ನ ಎಲ್.ಹೆಚ್.ನ ರೂಮ್ನಲ್ಲಿ ಒಂದು ವಾರ ಕಾಲ ವಿಶ್ರಾಂತಿ ಪಡೆಯಲಿದ್ದೇನೆ. ವೈದ್ಯರ ಸಲಹೆಯಂತೆ, ಇವಾಗ ನನ್ನ ಆರೋಗ್ಯ ಚೆನ್ನಾಗಿದೆ ಎಂದು ಅರಳಿ ಹೇಳಿದ್ದಾರೆ.

ಈ ತಿಂಗಳ 13ರಂದು ತನಗೆ ಕರೋನ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ತಾನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ. ವೈದ್ಯರ ಸಲಹೆದಂತೆ ತಮ್ಮೆಲ್ಲರ ಆಶಿರ್ವಾದದಿಂದ ಇವಾಗ ಗುಣಮುಖನಾಗಿದ್ದಾನೆ. ತಾನು ಇವಾಗ ಶಾಸಕರ ಭವನಕ್ಕೆ ಹೋಗುತ್ತಿದ್ದು ಅಲ್ಲಿ ಒಂದು ವಾರಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ವೈದ್ಯಕೀಯ ತಪಾಸಣೆಗೆ ಒಳಗಾದ ನಂತರ ಬೀದರಗೆ ಬಂದು ನನ್ನ ದೈನಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾಗಿ ಅರಳಿ ತಿಳಿಸಿದ್ದಾರೆ.

ಕರೋನ ಮಹಾಮಾರಿಯಿಂದ ಬಹಳ ಎಚ್ಚರಿಕೆಯಿಂದಿರಿ, ಮಾಸ್ಕ ಧರಿಸಿ, ಸಾನಿಟೈಸರ್ ಸರಿಯಾಗಿ ಬಳಸಿ, ದೈಹಿಕ ಅಂತರ ಕಾಪಾಡಿ, ವಿನಾ ಕಾರಣ ತಿರುಗಬೇಡಿ, ಸಭೆ ಸಮಾರಂಭ, ಮದುವೆ ಇವುಗಳಿಂದ ದೂರ ಇರಲು ಪ್ರಯತ್ನ ಮಾಡಿ, ತಮ್ಮ ಒಂದು ಸಣ್ಣ ತಪ್ಪಿನಿಂದ ಇಡಿ ಕುಟುಂಬವನ್ನೆ ಸಂಕಷ್ಟಕೆ ಸಿಲುಕಿಸಬೇಡಿ ಕರೋನ ಪಾಸೆಟಿವ್ ಬಂದರೂ ಹೆದರಿ ಆತಂಕ ಪಡುವ ಅವಶ್ಯಕತೆಯಿಲ್ಲ. ಹೋಮ್ ಐಶುಲೇಟ್ ಆಗಿ ವೈದ್ಯರ ಸಲಹೆ ಪಡೆದು ಮಾತ್ರೆ ಸೇವಿಸಿದರೆ ಸಾಕು ಧೈರ್ಯ ಗೆಡಬೇಡಿ ಎಂದು ಅರವಿಂದ ಅರಳಿ ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.