ಕೋವಿಡ್‍ನಿಂದ ಒರ್ವ ಸಾವು

ವಿಜಯಪುರ, ನ.20-ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 50 ವರ್ಷ ವಯೋಮಾನದ (ಪುರುಷ) ರೋಗಿ ಸಂಖ್ಯೆ 829680 ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.
ಇವರು ಕೆಮ್ಮು, ತೀವ್ರ ಉಸಿರಾಟ ತೊಂದರೆ, ಎನ್‍ಐಎಲ್, ಐಎಲ್‍ಐ ಸಂಬಂಧಿತ ಕಾಯಿಲೆಗಳಿಂದ ಬಳಲಿ, ದಿ.24-10-2020 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ದಿ.6-11-2020 ರಂದು ಮೃತಪಟ್ಟಿದ್ದಾರೆ. ಶಿಷ್ಟಾಚಾರದಂತೆ ಇವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.