ಕೋವಿಡ್‍ಗೆ ಹರ್ಷವರ್ಧನ್ ಮೃತ

ಹನೂರು:ಏ:03:ಜಿಲ್ಲೆಯಲ್ಲಿ ಕರೋನಾ ಸೋಂಕಿನ ಪರಿಣಾಮ ಅನೇಕ ಕುಟುಂಬಗಳು ದಯನೀಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಈ ಪೈಕಿ ನೆನ್ನೆ ರಾಮಾಪುರದಲ್ಲಿ 35 ವರ್ಷದ ವ್ಯಕ್ತಿಯು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ರಾಮಾಪುರದ ನಿವೃತ್ತ ಶಿಕ್ಷಕ ವೀರಭದ್ರ ಅವರ ಪುತ್ರ (ಮಂಜುನಾಥ ಮೆಡಿಕಲ್ಸ್ ಔಷಧ ಮಳಿಗೆಯನ್ನು ಹೊಂದಿದ್ದ) ಹರ್ಷವರ್ಧನ ಎಂಬುವರು ನಿಧನರಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಾಗಿದೆ.
ಕಂಗಾಲಾದ ಕುಟುಂಬ ವರ್ಗ: ಬಾಳಿ ಬದುಕಬೇಕಾದ 35 ರ ಹರೆಯದ ಹರ್ಷವರ್ಧನ್ ಮೃತಪಟ್ಟಿದ್ದು, ಮೃತರ ಮಗಳು 9ರ ಪ್ರಾಯದ ಮಗಳಿಗೂ ಕೋರೊನಾ ಪಾಸಿಟಿವ್ ಆಗಿದೆ. ಮೃತನ ಮಡದಿ 7 ತಿಂಗಳ ಗರ್ಭೀಣಿಯಾಗಿದ್ದು, ಆಕೆಯ ಸ್ಥಿತಿಯು ಕಲ್ಲು ಹೃದಯದವರನ್ನು ಕರಗಿಸುವಂತೆ ಆಗಿದೆ. ಒಟ್ಟಾರೆ ಕೊರೊನಾ ಬಡವ ಬಲ್ಲಿದ ಎನ್ನದೇ ತನ್ನ ಕಬಂಧಬಾಹುವನ್ನು ವಿಸ್ತರಿಸಿ ಜನತೆಯ ಬದುಕನ್ನು ದುರ್ಭಲಗೊಳಿಸುತ್ತಿದ್ದು, ಇಂತಹ ಕರುಣಾಜನಕ ಪ್ರಕರಣಗಳನ್ನು ಕಂಡ ಮೇಲೂ ಜನತೆ ತೀವ್ರ ಎಚ್ಚರಗೊಳ್ಳುವುದು ಅವಶ್ಯಕ. ಇಲ್ಲದಿದ್ದರೆ ಮತ್ತಷ್ಟು ಕುಟುಂಬಗಳು ಇಂತಹ ದಯನೀಯ ಸ್ಥಿತಿಗೆ ತಲುಪುವುದರಲ್ಲಿ ಎರಡು ಮಾತಿಲ್ಲ.