ಕೋವಿಡ್‍ಗಾಗಿ 50 ಲಕ್ಷ ಬಿಡುಗಡೆ

ಧಾರವಾಡ ಮೇ 21- ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಅವಶ್ಯಕತೆ ಇರುವ ಸಲಕರಣೆಗಳನ್ನು ಖರೀದಿಸಲು ತಮ್ಮ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನ ರೂ. 50 ಲಕ್ಷ ಬಿಡುಗಡೆ ಮಾಡಿರುವುದಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಪಶ್ಚಿಮ ಪದವಿಧರರ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಧಾರವಾಡಕ್ಕೆ ಹಾಗೂ ಕಾರವಾರಕ್ಕೆ ತಲಾ ರೂ. 13 ಲಕ್ಷ, ಅದರಂತೆ ಗದಗ ಹಾಗೂ ಹಾವೇರಿ ಜಿಲ್ಲೆಗೆ ತಲಾ ರೂ. 12 ಲಕ್ಷ ಅನುದಾನವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಂಚಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಹಣವನ್ನು ಸಂಬಂಧಪಟ್ಟ ಉಸ್ತುವಾರಿ ಸಚಿವರುಗಳಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ ಹಾಗೂ ಶಿವರಾಮ ಹೆಬ್ಬಾರ ಇವರ ಸೂಚನೆಯಂತೆ ವೆಂಟಿಲೇಟರ್, ಆಮ್ಲಜನಕದ ಕಾನ್ಸ್‍ಂಟೇಟರ್ ಮತ್ತು ಔಷದೋಪಕರಣಗಳ ಕಿಟ್ ಇತ್ಯಾದಿ ಉಪಕರಣಗಳನ್ನು ನೀಡಲು ಜಿಲ್ಲಾಧಿಕಾರಿಗಳು ಅನುದಾನದ ಹಣವನ್ನು ಬಳಕೆ ಮಾಡುವಂತೆ ತಿಳಿಸಿದ್ದಾರೆ.