ಕೋವಿಡ್‌ ವೇಳೆ- ರೋಗನಿರೋಧಕ ಶಕ್ತಿ ಹೆಚ್ಚಿಸಲು ಮನೆಮದ್ದು


ಕೋವಿಡ್ ಸೋಂಕು ತಡೆಗೆ ವೈದ್ಯಲೋಕ ಲಸಿಕೆ ಅಭಿವೃದ್ಧಿಪಡಿಸಲು ಸತತವಾಗಿ ಶ್ರಮಿಸುತ್ತಿದೆ. ಹಾಗಾಗಿ ಅದನ್ನು ದೂರವಿಡಲು ದೇಹದ ರೋಗನಿರೋಧಕ ಶಕ್ತಿಯೊಂದೇ ಮದ್ದು ಎಂದು ತಜ್ಞರು ಹೇಳುತ್ತಾರೆ. ಮುಖ್ಯವಾಗಿ ವಿಟಮಿನ್‌ ಸಿ ಹಾಗೂ ವಿಟಮಿನ್‌ ಡಿಗಳನ್ನು ನಮ್ಮ ಬಾಡಿ ಹೊಂದಿರಬೇಕು. ಬಿಸಿಲಿನಲ್ಲಿ ವಿಟಮಿನ್‌ ಡಿ ಪುಷ್ಕಳವಾಗಿದೆ ಸಂಜೆ ಮುಂಜಾನೆ ಇಪ್ಪತ್ತು ನಿಮಿಷ ಬಿಸಿಲಿನಲ್ಲಿ ನಿಂತರೆ ವಿಟಮಿನ್‌ ಡಿ ಧಾರಾಳ. ಆದರೆ ವಿಟಮಿನ್‌ಸಿಯನ್ನು ನೀವು ಆಹಾರದಿಂದಲೇ ಗಳಿಸಿಕೊಳ್ಳಬೇಕು. ವಿಟಮಿನ್‌ ಸಿ ಹೆಚ್ಚಾಗಿ ಇರುವ ಆಹಾರಗಳು ಇಲ್ಲಿವೆ. ಆದರೆ ಇತ್ತೀಚೆಗೆ ಯುವಜನಾಂಗ ಇಂತಹ ಆಹಾರವನ್ನು ನಿರ್ಲಕ್ಷ ಮಾಡುತ್ತಾರೆ ಎಂಬುದು ವಿಪಯಾರ್ಸ

ನಿಂಬೆಹಣ್ಣು ನಮ್ಮ ದಾಹವನ್ನು ತಣಿಸುವ, ಬಾಡಿಯನ್ನು ಶುದ್ಧೀಕರಿಸುವ, ಪಚನಕ್ರಿಯೆಯನ್ನು ಸರಾಗ ಮಾಡುವ, ಹೊಟ್ಟೆಯಲ್ಲಿ ಆಗುವ ಆಸಿಡಿಟಿಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂಬುದೆಲ್ಲ ನಿಮಗೆ ಗೊತ್ತು. ದಿನಕ್ಕೊಮ್ಮೆ ನಿಂಬೂ ಪಾನಿ ಕುಡಿದರೆ ಕೋವಿಡ್ ದೂರ ಅಂತಲೂ ಡಾಕ್ಟರ್‌ಗಳೇ ಹೇಳುತ್ತ ಬಂದಿದ್ದಾರೆ. ಈ ಪುಟ್ಟ ಹಣ್ಣಿನಲ್ಲಿ ನಿಮ್ಮ ರೋಗಪ್ರತಿರೋಧ ಶಕ್ತಿ ಹೆಚ್ಚಿಸುವ ಎಷ್ಟೋ ಗುಣಗಳಿವೆ. ಥಯಮೀನ್‌, ರೈಬೋಫ್ಲಾವಿನ್‌, ವಿಟಮಿನ್‌ ಬಿ ಸಿಕ್ಸ್, ತಾಮ್ರ, ಮ್ಯಾಂಗನೀಸ್‌ ಮುಂತಾದವುಗಳೆಲ್ಲ ಇದರಲ್ಲಿವೆ.

ನೆಲ್ಲಿಕಾಯಿಯನ್ನು ಹಾಗೇ ಸೇವಿಸುವುದು ಅಥವಾ ಉಪ್ಪಿನಕಾಯಿ, ಸಾಕಷ್ಟು ವಿಟಮಿನ್‌ ಸಿಯ ಖಜಾನೆ ಇದು. ಪವರ್‌ಫುಲ್‌ ಆಂಟಿ ಆಕ್ಸಿಡೆಂಟ್‌ಗಳು ಇದರಲ್ಲಿವೆ. ದಿನದಲ್ಲಿ ಒಂದೇ ಒಂದು ನೆಲ್ಲಿಕಾಯಿ ತಿಂದರೆ ಸಾಕು, ನಲುವತ್ತಾರು ಶೇಕಡದಷ್ಟು ವಿಟಮಿನ್‌ ಸಿ ನಿಮಗೆ ಸಿಕ್ಕಿಬಿಡುತ್ತದೆ. ನಮ್ಮ ಪಚನಶಕ್ತಿ, ಸ್ನಾಯುಗಳ ಶಕ್ತಿ, ಸಂತಾನೋತ್ಪಾದನಾ ಶಕ್ತಿಯನ್ನೂ ಅದು ವರ್ಧಿಸುತ್ತದೆ.

ಹಣ್ಣುಗಳ ರಾಜ ಎನಿಸಿಕೊಳ್ಳದಿದ್ದರೂ ಕಿತ್ತಳೆವೆ ವಿಶಿಷ್ಟ ಗುಣ ಇರುವುದು ಅದರ ಔಷಧೀಯ, ಪೌಷ್ಟಿಕ ಹಾಗೂ ಶಕ್ತಿವರ್ಧಕ ಗುಣಗಳಿಂದ. ಇದು ಸಿಟ್ರಿಕ್‌ ಫ್ರುಟ್. ಸಿಟ್ರಿಕ್‌ ಹಣ್ಣುಗಳು, ಹುಳಿ ಇರುವ ಹಣ್ಣುಗಳೆಲ್ಲವೂ ವಿಟಮಿನ್‌ ಸಿಯ ಖಜಾನೆಗಳು. ನೂರು ಗ್ರಾಂನಷ್ಟು ಕಿತ್ತಳೆ ಸೇವಿಸಿದರೆ ಐವತ್ತಮೂರು ಮಿಲಿಗ್ರಾಂನಷ್ಟು ವಿಟಮಿನ್‌ ಸಿ ನಿಮ್ಮ ದೇಹಕ್ಕೆ ಸೇರುತ್ತೆ. ನಮ್ಮ ಜೀವಕೋಶಗಳಇಗೆ ಪ್ರತಿದಿನ ಆಘುವ ಹಾನಿಯನ್ನು ಇದು ತಡೆಯುತ್ತದೆ. ಇದರಲ್ಲಿ ವಿಟಮಿನ್‌ ಡಿ ಕೂಡ ಇದೆ.

ಇನ್ನು ಮೀನು, ಮೊಟ್ಟೆ, ಚೀಸ್‌, ಅಣಬೆ ಯಂತಹ ಆಹಾರ ಸೇವನೆಯಿಂದ ವಿಟಮಿನ್‌ ಡಿ ದೇಹಕ್ಕೆ ಬೇಗ ಸೇರಿಕೊಳ್ಳುತ್ತದೆ, ಹಾಗೇ ಗೋಡಂಬಿ, ಬಾದಾಮಿ, ಹತ್ತಿ ಹಣ್ಣುಗಳಿಂದ ವಿಟಮಿನ್‌ ಇ ದೊರೆತರೇ, ಮಾಂಸ, ಚಿಕನ್‌, ಕುಂಬಳಕಾಯಿ ಬೀಜದಿಂದ ಜೀಂಕ್‌ ಅಂಶ ದೇಹಕ್ಕೆ ಸೇರಿ ರೋಗನಿರೋದಕ ಶಕ್ತಿ ಹೆಚ್ಚಿಸಲಿದೆ ಎಂದು ವೈದ್ಯರು ಹೇಳುತ್ತಾರೆ. ಕ್ಯಾಪ್ಸಿಕಂ, ಪೇರಳೆ, ನಿಂಬೆಹಣ್ಣು, ಪಪ್ಪಾಯಿ ವಿಟಮಿನ್‌ ಸಿ ವೃದ್ದಿಸಿ ಬ್ಯಾಕ್ಟಿರಿಯಾ ವಿರುದ್ಧ ಹೋರಾಡತ್ತದೆ.