ಕೋವಿಡ್‌ ನಿರ್ವಹಣೆ: ಡಿಕೆಶಿಗೆ ಮಾಹಿತಿ ನೀಡಿದ ರಮಾನಾಥ ರೈ

ಮಂಗಳೂರು, ಜೂ.೩- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು ಮಾಜಿ ಸಚಿವ ರಮಾನಾಥ ರೈ ಅವರು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.

ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ಕೋವಿಡ್ ನಿರ್ವಹಣೆ ಕುರಿತು ನಡೆಸಲಾಗುತ್ತಿರುವ ಕಾರ್ಯಕ್ರಮದ ಬಗ್ಗೆ ರಮಾನಾಥ ರೈ ಅವರು ಡಿಕೆಶಿಯವರಿಗೆ ಮಾಹಿತಿ ನೀಡಿದರು. ಕೊರೋನಾ ನಿಯಂತ್ರಣ ಮತ್ತು ಲಾಕ್‌ಡೌನ್ ಸಂಬಂಧಿಸಿ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ಕೈಗೊಂಡಿರುವ ಪರಿಹಾರ ಹಾಗೂ ಹೆಲ್ಪ್ ಲೈನ್ ಮೂಲಕ ನೀಡಲಾಗುತ್ತಿರುವ ನೆರವು ಬಗ್ಗೆ ವಿವರಿಸಿದರು. ಜಿಲ್ಲೆಯ ಎಲ್ಲಾ ಬ್ಲಾಕ್ ಸಮಿತಿಗಳು, ವಿವಿಧ ಮಂಚೂಣಿ ಘಟಕಗಳು ಮತ್ತು ಜಿಲ್ಲಾ ಸಮಿತಿಯ ವತಿಯಿಂದ ನಡೆಯುತ್ತಿರುವ ವೈದ್ಯಕೀಯ ನೆರವು, ಆಂಬ್ಯುಲೆನ್ಸ್ ಸೇವೆ, ಆಕ್ಸಿಜನ್ ಒದಗಿಸುವುದು, ಆಹಾರ ಕಿಟ್‌ವಿತರಣೆ, ದಿನನಿತ್ಯ ಆಹಾರದ ಪೊಟ್ಟಣ ಹಂಚಿಕೆಯ ಬಗ್ಗೆ ಮಾಹಿತಿ ನೀಡಿದರು.