ಕೋವಿಡ್‌: ಕೊಟ್ಟೂರು ಎಪಿಎಂಸಿ ನಾಲ್ಕು ದಿನಗಳಿಗೆ ಸೀಮಿತ

ಕೊಟ್ಟೂರು ಏ 25 : ಕೊರೊನಾ ಸೋಂಕಿನ ಹೆಚ್ಚಳದ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರದ ಎಪಿಎಂಸಿಯನ್ನು ನಾಲ್ಕು ದಿನಗಳಿಗೆ ಸೀಮಿತ ಗೋಳಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಬಿಮಾರುತಿ ಹೇಳಿದರು.
ಕೊರೊನಾ ಸೋಂಕು ಹರಡುವಿಕೆ ತಡೆಗೆ ಮಾರುಕಟ್ಟೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ವಹಿವಾಟು ಸ್ಥಗಿತಗೊಳಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆದು ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ವ್ಯಾಪಾರ ವಹಿವಾಟು ನಡೆಸಲು ಕ್ರಮಕೈಗೊಂಡಿದ್ದು ರೈತರು ಸಹಕರಿಸಬೇಕು ತೀರ್ಮಾನಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಲಾಗಿದೆ ಎಂದರು.ಎಪಿಎಂಸಿ ಮಾಜೀ ಅಧ್ಯಕ್ಷ ಹಾಲಿ ಸದಸ್ಯ ಬೂದಿ ಶಿವಕುಮಾರ್, ಇದ್ದರು