ಕೋವಿಡ್‌ಗೆ ಮತ್ತೊಂದು ಮದ್ದು

ನವದೆಹಲಿ, ಜೂ.೧- ಕೋವಿಡ್ ಸೋಂಕಿನ ಕಡಿಮೆ ಲಕ್ಷಣದಿಂದ ಬಳಲುತ್ತಿರುವ ಜನರಿಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಎಲಿ ಲಿಲ್ಲಿಅಂಡ್ ಕಂಪನಿಯ ಔಷದ ಬಳಕೆಗೆ ದೇಶದಲ್ಲಿ ತುರ್ತು ಅನುಮತಿ ನೀಡಲಾಗಿದೆ.
ಕೊರೋನಾ ಸೋಂಕಿನಿಂದ ಬಾಧಿತರಾಗಿರುವ ಚಿಕಿತ್ಸೆ ಪಡೆಯುತ್ತಿರುವ ಯುವ ಸಮುದಾಯಕ್ಕೆ ದೇಹದಲ್ಲಿ ಆಮ್ಲಜನಕ ಮಟ್ಟ ಹೆಚ್ಚಳ ಮಾಡಲು ಮತ್ತು ಸೋಂಕಿನಿಂದ ರಕ್ಷಣೆ ನೀಡಲು ಸಹಕಾರಿಯಾಗಲಿದೆ.ಈ ಸಂಬಂದ ಕಳೆದ ತಿಂಗಳು ತುರ್ತು ಬಳಕೆಗೆ ಅನುಮತಿ ಪಡೆಯಲಾಗಿದೆ ಎಂದು ಔಷಧ ತಯಾರಿಕಾ ಸಂಸ್ಥೆ ತಿಳಿಸಿದೆ
ಎಲಿ ಲಿಲ್ಲಿ ಮತ್ತು ಕಂಪನಿಯ ಔಷಧದಿಂದಾಗಿ ದೇಶದಲ್ಲಿ ಹರಡಿರುವ ಎರಡನೇ ಹಂತದ ಕೊರೊನಾ ಸೋಂಕಿನ ಅಲೆ ತಡೆಗಟ್ಟಲು ಸಹಕಾರಿ ಆಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಎಲಿ ಲಿಲ್ಲಿಯ ಔಷಧ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವ ಸಾಮರ್ಥ್ಯ ಹೊಂದಿದೆ.ಇದರಿಂದಾಗಿ ಕೋವಿಡ್ ಸೋಂಕಿನ ವಿರುದ್ದ ಹೋರಾಡಲು ಸಹಕಾರಿಯಾಗಲಿದೆ ಎಂದು ಕಂಪನಿ ತಿಳಿಸಿದೆ.
ಅಮೆರಿಕದ ಔಷಧ ತಯಾರಿಕಾ ಸಂಸ್ಥೆ, ಭಾರತ ಸರ್ಕಾರ ಮತ್ತು ಔಷಧ ನಿಯಂತ್ರಣಾ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ.ಹೆಚ್ಚಿನ ಲಸಿಕೆಯನ್ನು ಉಡುಗೊರೆ ನೀಡಲು ಸಿದ್ಧವಿರುವುದಾಗಿ ಔಷಧ ತಯಾರಿಕಾ ಸಂಸ್ಥೆ ಹೇಳಿದೆ. ಭಾರತ ಕೊರೊನಾ ಸೋಂಕಿನ ಎರಡನೇ ಅಲೆಯ ವಿರುದ್ಧ ಹೋರಾಟ ಮಾಡುತ್ತಿದ್ದು ಅದರ ಜೊತೆ ಕೈಜೋಡಿಸಲು ಸಿದ್ಧವಿರುವುದಾಗಿ ಸಂಸ್ಥೆ ಹೇಳಿದೆ.