ಕೋವಿಡ್‌ಗೆ ಭಾರತದ ಲಸಿಕೆ ರಾಮಬಾಣ

ನವದೆಹಲಿ, ಜ.೯- ಭಾರತದಲ್ಲಿ ತಯಾರಾಗಿರುವ ( ಮೇಡ್ ಇನ್ ಇಂಡಿಯಾ) ಎರಡು ಕೊರೋನಾ ಲಸಿಕೆಯ ಮೂಲಕ ಜನರ ಪ್ರಾಣ ಮತ್ತು ಮಾನವೀಯತೆ ರಕ್ಷಣೆ ಮಾಡಲು ಸಿದ್ಧರಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.

ಸೋಂಕು ಹರಡುವಿಕೆಯಿಂದ ಆರ್ಥಿಕತೆಯ ಮೇಲೆ ಹಾನಿ ಉಂಟುಮಾಡುವ ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುಸಿಯುವಂತಾಗಿದೆ. ಹೀಗಾಗಿ ಅದನ್ನು ಮೇಲೆತ್ತುವ ಜೊತೆಗೆ ಜನರ ರಕ್ಷಣೆಗೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.

೧೬ ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ದೇಶಿಯವಾಗಿ ಒಂದು ಅಲ್ಲ ೨ ಲಸಿಕೆ ಸಿದ್ಧಗೊಂಡಿದೆ ಅದರ ಮೂಲಕ ದೇಶದ ಜನರ ರಕ್ಷಣೆ ಮಾಡಲು ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ.

ಕೊರೋನಾ ಸೋಂಕಿನಿಂದ ಕಳೆದ ಒಂದು ವರ್ಷದಲ್ಲಿ ಅನೇಕ ಸಮಸ್ಯೆಗಳನ್ನು ಎಲ್ಲರೂ ಪ್ರತಿಯೊಬ್ಬರೂ ಎದುರಿಸಿದ್ದಾರೆ. ಮತ್ತು ಸವಾಲುಗಳನ್ನು ಎದುರಿಸಲು ಅದಕ್ಕಾಗಿ ತಮ್ಮ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಅದೇ ರೀತಿ ಜಗತ್ತಿನ ಮೂಲೆ ಮೂಲೆಯಲ್ಲಿರುವ ಭಾರತೀಯರು ಕೂಡ ಎಂದು ಹೇಳಿದರು.

ಕೊರೋನಾ ಸೋಂಕಿನ ಸಂಕಷ್ಟದ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರನ್ನು ಅಭಿನಂದಿಸುವುದು ತಮ್ಮ ಕರ್ತವ್ಯ ಎಂದು ಹೇಳಿದರು

ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಭಾರತೀಯರನ್ನು ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದ ಮೂಲಕ ಭೇಟಿಮಾಡುವ ಮತ್ತು ಅವರೊಂದಿಗೆ ಚರ್ಚೆ ಮಾಡುವ ಅವಕಾಶ ಸಿಕ್ಕಿರುವುದು ಸುಸಂದರ್ಭ. ಅನಿವಾಸಿ ಭಾರತೀಯರು “ಮಾ ಭಾರತಿ” ( ತಾಯಿ ಭಾರತಿ) ಎನ್ನುವ ಘೋಷ್ಯ ಜಗತ್ತಿನ ಮೂಲೆ ಮೂಲೆಯಲ್ಲಿ ಕೇಳಿಸುತ್ತದೆ ಎಂದು ತಿಳಿಸಿದರು

ಸ್ವಾಲಂಭನೆ:

ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಪಿಪಿಇ ಅನೇಕ ರಕ್ಷಣಾ ಸಾಮಾಗ್ರಿಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಇದೀಗ ದೇಶದಲ್ಲಿ ತಯಾರಿಸುವ ಮೂಲಕ ಸ್ವಾವಲಂಬನೆ ಸಾಧಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೋನೋ ಸೋಂಕಿನ ಸಮಯದಲ್ಲಿ ಔಷಧಿಗಳನ್ನು ಜಗತ್ತಿನ ಅನೇಕ ದೇಶಗಳಿಗೆ ಭಾರತ ಸರಬರಾಜು ಮಾಡಿದೆ. ಅದೇ ರೀತಿ ಲಸಿಕೆ ಸಿದ್ಧವಾದ ಬಳಿಕ ವಿವಿಧ ದೇಶಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ವಿತರಣೆ ಮಾಡುವುದಾಗಿ ಅವರು ಹೇಳಿದರು.

ವರ್ಚುವಲ್ ಕಾರ್ಯಕ್ರಮದಲ್ಲಿ ಸುರಿನೇಮ್ ಗಣ ರಾಜ್ಯದ ಅಧ್ಯಕ್ಷ ಚಂದ್ರಿಕ ಪ್ರಸಾದ್ ಸಾತೋಂಕಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು

ಸವಾಲು ಎದುರಿಸಲು ಸಿದ್ದ;

ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಲು ಭಾರತ ಸದಾ ಸಿದ್ಧವಿದೆ. ಅದೇ ರೀತಿ ಕೊರೋನಾ ಸವಾಲು ಎದುರಿಸಲು ಕೂಡ ಸಿದ್ಧವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶದಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಹೇಳಿದ ಅವರು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗಿದೆ ಇದರಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅನಿವಾಸಿಯರ ಬಗ್ಗೆ ಮೆಚ್ಚುಗೆ:
ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಭಾರತೀಯರು ಭಾರತೀಯ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೋನೋ ಸೋಂಕಿನ ಸಂಕಷ್ಟದ ಸಮಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು