ಕೋವಿಡ್‌ಗೆ ಕೋವಿಶೀಲ್ಡ್ ರಾಮಬಾಣ: 3ನೇ ಹಂತದ ಪ್ರಯೋಗ

ನವದೆಹಲಿ, ನ. ೧೨- ಕೊರೊನಾ ಸೋಂಕಿಗೆ ಅಭಿವೃದ್ಧಿಪಡಿಸಲಾಗಿರುವ ಕೋವಿಶೀಲ್ಡ್ ರಾಮಬಾಣವಾಗಲಿದೆ ಎಂದು ಹೇಳಿರುವ ಪುಣೆ ಮೂಲದ ಅತಿದೊಡ್ಡ ಔಷಧ ತಯಾರಿಕಾ ಸಂಸ್ಥೆ ಭಾರತೀಯ ಸೆರಂ ಇನ್ಸ್ಟಿಟ್ಯೂಟ್ ಮೂರನೇ ಹಂತದ ಪ್ರಯೋಗಕ್ಕೆ ಮುಂದಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಜೊತೆಗೂಡಿ ಸೆರಂ ಸಂಸ್ಥೆ ಕೋವಿಶೀಲ್ಡ್ ಅಭಿವೃದ್ಧಿ ಪಡಸಿದ್ದು, ಅದರ ಮೂರನೆ ಹಂತದ ಪ್ರಯೋಗ ಆರಂಭಿಸಿದೆ
ದೇಶದ ೧೫ ಕಡೆಗಳಲ್ಲಿ ಕೋವಿಶೀಲ್ಡ್‌ನ ಎರಡು ಮತು ಮೂರನೇ ಹಂತದ ಪ್ರಯೋಗ ಪ್ರಗತಿಯಲ್ಲಿದೆ ಎಂದು ಸೆರಂ ಸಂಸ್ಥೆ ತಿಳಿಸಿದೆ.
ಮೂರನೇ ಹಂತದ ಪ್ರಯೋಗಕ್ಕೆ ಅ. ೩೧ರವರೆಗೆ ೧೬೦೦ ಮಂದಿ ನೊಂದಣಿ ಮಾಡಿಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಸೆರಂ ಸಂಸ್ಥೆ ತಿಳಿಸಿದೆ.
ಜಗತ್ತಿನಲ್ಲಿ ಕೊರೊನಾ ಸೋಂಕಿಗೆ ಅನೇಕ ಔಷಧಿ ತಯಾರಿಕಾ ಸಂಸ್ಥೆಗಳು ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ವಿಶ್ವದ ಅತಿದೊಡ್ಡ ತಯಾರಿಕಾ ಸಂಸ್ಥೆಯಾಗಿರುವ ಸೆರಂ ಮೂರನೇ ಹಂತದ ಲಸಿಕೆಯ ಪ್ರಯೋಗಕ್ಕೆ ಮುಂದಾಗಿರುವುದು ದೇಶದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಆಕ್ಷ್ ಫರ್ಡ್ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದುವರೆಗಿನ ಪ್ರಯೋಗ ಬಹುತೇಕ ಯಶಸ್ವಿಯಾಗಿದ್ದು, ಮೂರನೇ ಹಂತದ ಲಸಿಕೆ ಯಶಸ್ವಿಯಾಗುವ ವಿಶ್ವಾಸ ಹೊಂದಲಾಗಿದೆ.
ಐಸಿಎಂಆರ್ ೪೦ ದಶಲಕ್ಷ ಲಸಿಕೆಯನ್ನು ಆರಂಭದಲ್ಲಿ ಉತ್ಪಾದಿಸಲು ಮುಂದಾಗಿದೆ. ಪುಣೆಯ ಪ್ರಯೋಗಾಲಯದಲ್ಲಿ ಲಸಿಕೆ ಅಭಿವೃದ್ಧಿಯಾಗುತ್ತಿದೆ.