ಕೋವಿಡ್‌ಗೆ ಇಂಟ್ರಾನಾಸಲ್ ಲಸಿಕೆ ಅಭಿವೃದ್ಧಿ

ಸ್ಯಾನ್ ಫ್ರಾನ್ಸಿಸ್ಕೋ, ಸೆ.೧೨- ಕೋವಿಡ್ ಸೋಂಕು ಸಂಬಂಧಿಸಿದಂತೆ ಅಮೆರಿಕದ ವಿಜ್ಞಾನಿಗಳ ತಂಡವೂ ಕೂಡ ಸಿಂಗಲ್ ಡೋಸ್ ಇಂಟ್ರಾನಾಸಲ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಈ ಲಸಿಕೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತ ಮೂಲದ ವಿಜ್ಞಾನಿ ಸೋನಾಲಿ ಚತುರ್ವೇದಿ ಸೇರಿದಂತೆ ಅವರ ತಂಡ ಸಿಂಗಲ್ ಡೋಸ್ ಇಂಟ್ರಾನಾಸಲ್ ಲಸಿಕೆಯನ್ನು ಕಂಡು ಹಿಡಿದಿದೆ.

ಇದು ನೇಕ ಕೋವಿಡ್ ರೂಪಾಂತರಗಳನ್ನು ನಿಯಂತ್ರಿಸಬಲ್ಲ, ಸೋಂಕಿನ ಹರಡುವ ತೀವ್ರತೆಯನ್ನು ಕುಗ್ಗಿಸಬಲ್ಲ ಶಕ್ತಿ ಹೊಂದಿದೆ ಎಂದು ತಂಡ ಹೇಳಿಕೊಂಡಿದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಗ್ಲಾಡ್‌ಸ್ಟೋನ್ ಸಂಸ್ಥೆಯ ಈ ತಂಡ, ಈ ಇಂಟ್ರಾನಾಸಲ್ ಲಸಿಕೆ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸೋಂಕನ್ನು ತಡೆಯುತ್ತದೆ.

ಇದು ಒಂದೇ ಡೋಸ್ ಆಂಟಿವೈರಲ್ ಆಗಿದೆ. ಕೋವಿಡ್ ರೋಗಲಕ್ಷಣಗಳು ಮತ್ತು ತೀವ್ರತೆ ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿ ಚತುರ್ವೇದಿ ಅವರು ತಿಳಿಸಿದ್ದಾರೆ.

ಎಸ್ ಎಆರ್ ಎಸ್-ಸಿಒವಿ-೨ ಸೇರಿದಂತೆ ಉಸಿರಾಟದ ಮೇಲೆ ಪರಿಣಾಮ ಬೀರುವ ಕೊರೋನಾ ರೂಪಾಂತಾರಿಗಳ ಪ್ರಸರಣವನ್ನು ತಡೆಯಲು ಆಂಟಿ ವೈರಲ್‌ಗಳು ಮತ್ತು ಲಸಿಕೆಗಳಿಗೆ ಈ ಇಂಟ್ರಾನಾಸಲ್ ಲಸಿಕೆ ಅಸಾಧಾರಣವಾಗಿ ಕೆಲಸ ಮಾಡುತ್ತದೆ ಎಂಬುದು ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ.

ಟಿಐಪಿ ವಿಧಾನವು ಸೋಂಕಿತ ಜೀವಕೋಶಗಳ ಒಳಗೆ ವೈರಸ್ ಅನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಟಿಐಪಿ ವಿಧಾನ ವೈರಸ್?ಗೆ ಗುರಿಯಾದ ಕೋಶಗಳ ಒಳಗೆ ನೆಲೆಸಿ ಚಿಕಿತ್ಸೆ ನೀಡುವುದರಿಂದ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್‌ನ ಹೊ ತಳಿಗಳು ದಾಳಿ ಮಾಡಿದರೂ ಅದನ್ನು ತಡೆಯುವ ಶಕ್ತಿ ಇದಕ್ಕಿದೆ. ಹಲವು ರೂಪಾಂತರಗಳ ಮೇಲೆ ಈ ಇಂಟ್ರಾನಾಸಲ್ ಲಸಿಕೆಯನ್ನು ಪ್ರಯೋಗ ಮಾಡಲಾಗಿದೆ ಎಂದೂ ಉಲ್ಲೇಖಿಸಲಾಗಿದೆ.