ಕೋವಾಕ್ಸಿನ್ ಬೆಲೆ 600 ರಿಂದ 400 ರೂ ಗೆ ಇಳಿಕೆ

ಹೈದರಾಬಾದ್, ಏ.29- ಸೆರಂ ಸಂಸ್ಥೆ “ಕೋವಿಶೀಲ್ಡ್” ಬೆಲೆ ಇಳಿಕೆ ಮಾಡಿದ ಬೆನ್ನಲ್ಲೆ ಭಾರತ್ ಭಯೋಟೆಕ್ ಸಂಸ್ಥೆ “ಕೋವಾಕ್ಸಿನ್ ” ಲಸಿಕೆಯ ಬೆಲೆ ಇಳಿಸಿದೆ.

ಭಾರತ್ ಬಯೋಟೆಕ್ ಪ್ರತಿ ಡೋಸ್ ಕೋವಾಕ್ಸಿನ್ ಬೆಲೆಯನ್ನು 600 ರೂಪಾಯಿಯಿಂದ 400 ರೂಪಾಯಿಗೆ ಇಳಿಕೆ ಮಾಡಿ ಈ ಸಂಬಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಈ ಮುಂಚೆ ಭಾರತ್ ಭಯೋಟೆಕ್ ಸರ್ಕಾರಕ್ಕೆ 600 ರೂಪಾಯಿ ದರದಲ್ಲಿ ರಾಜ್ಯ ಸರ್ಕಾರಗಳಿಗೆ ಕೊವಾಕ್ಸಿನ್ ಲಸಿಕೆ ನೀಡುವುದಾಗಿ ಪ್ರಕಟಿಸಿತ್ತು.

1200 ರೂ ನಿಗಧಿ

ಖಾಸಗೀ ಆಸ್ಪತ್ರೆಗಳಿ್ಗೆಗೆ ಪ್ರತಿ ಡೋಸ್ ಲಸಿಕೆಯನ್ನು 1200 ರೂಪಾಯಿಗೆ ನೀಡುವುದಾವಿ ಭಾರತ್ ಭಯೋಟೆಕ್ ಪ್ರಕಟಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತ್ ಬಯೋ ಟೆಕ್ ಸಂಸ್ಥೆಯ ಈ‌ ನಿರ್ದಾರದಿಂದ ರಾಜ್ಯ ಸರ್ಕಾರಗಳಿಗೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಲಿದೆ.ಜೊತೆಗೆ ಜನರ ಜೀವ ಉಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ಶೇ.25 ರಷ್ಟು ಇಳಿಕೆ:

ಪುಣೆಯ ಭಾರತೀಯ ಸೆರಂ ಸಂಸ್ಥೆ ನಿನ್ನೆ ಯಷ್ಟೇ ರಾಜ್ಯ ಸರ್ಕಾರಕ್ಕೆ ಮಾರಾಟ ಮಾಡುವ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ದರವನ್ನು ಶೇ. 25 ರಷ್ಟು ಇಳಿಕೆ ಮಾಡಿತ್ತು.

ಇದೀಗ ಸೆರಂ ಸಂಸ್ಥೆಯನ್ನು ಭಾರತ್ ಭಯೋಟೆಕ್ ಕೂಡ ಅನುಸರಿಸಿದ್ದು ಶೆ.25 ರಷ್ಟು ಪ್ರತಿ ಡೋಸ್ ಲಸಿಕೆ ದರ ಕಡಿಮೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.