ಕೋಳೂರು ಬಳಿ ಪೊಲೀಸರು ಜನರ ಮಧ್ಯೆ ಘರ್ಷಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.30: ಪೊಲೀಸ್ ‌ಮತ್ತು ಸಾರ್ವಜನಿಕರ ಮಧ್ಯೆ ವಾಗ್ವಾದ, ಗಲಾಟೆ,  ಘರ್ಷಣೆ ಕೋಳೂರು ಬಳಿ ಇಂದು ನಡೆದು ಎರೆಡು ತಾಸುಗಳಿಗೂ ಹೆಚ್ಚು ಕಾಲ ರಸ್ತೆ ಬಂದ್ ಆಗಿತ್ತು. .
ಕೊಳೂರು  ಬಳಿ ಗ್ರಾಮಸ್ಥರು ಸೇರಿದಂತೆ ‌ನೂರಾರು ರೈತರು ಕೃಷಿ ಹೊಂಡ ಮಾದರಿಯ ಹಳ್ಳದಲ್ಲಿ ಬಿದ್ದಿದ ಶವ ನೋಡಲು ಬಂದಿದ್ರು. ಜನರ ನೂಕುನುಗ್ಗಲು ಹೆಚ್ಚಾದ ಹಿನ್ನಲೆ ಪೊಲೀಸರು ಲಾಠಿ ಬೀಸಿದ್ರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರ ವಿರುದ್ಧ ತಿರುಗಿಬಿದ್ದರು.
ಸುಖಾಸುಮ್ಮನೆ ಹೊಡೆಯುತ್ತಾ ರೆಂದು ವಾಗ್ವಾದ ಗಲಾಟೆ ಮಾಡಿದರು.
ಸಾರ್ವಜನಿಕರನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟ ಪೊಲೀಸರು ಲಾಠಿ ಬೀಸಿದರು. ಎದ್ದೆನೊ ಬಿದ್ದನೋ ಎಂದು ಜನ ಓಡಿ ಬಿದ್ದರು. ಬಡಿಸಿಕೊಂಡರು, ಗಾಯಗೊಂಡರು.
ನಂತರ ಜನತೆ ಕುರುಗೋಡು ಪಿಎಸ್ ಐ ಮಣಿಕಂಠ ಅವರ ವಿರುದ್ದ ಘೋಷಣೆ ಕೂಗುತ್ತ.
ರಸ್ತೆ ಬಂದ್ ಮಾಡಿದರು.ಸ್ಥಳಕ್ಕೆ ಶಾಸಕ ಗಣೇಶ್ ಭೇಟಿ ನೀಡಿ ರೈತರಿಗೂ ಸಾಥ್ ನೀಡಿ. ನಂತರ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರಂತೆ