
ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ15. ಬಳ್ಳಾರಿ ಹತ್ತಿರದ ಕೋಳೂರು ಗ್ರಾಮದಲ್ಲಿ ಸೆ.10 ರಂದು ಭಾನುವಾರ ಶ್ರಾವಣ ರಂಗೋತ್ಸವ ಮತ್ತು ನಾಟಕ ಪ್ರದರ್ಶನ ನಡೆಯಿತು. ಸ್ಥಳೀಯ ಶ್ರೀ ರಾಮಲಿಂಗೇಶ್ವರ ರಂಗಕಲಾ ಟ್ರಸ್ಟ್ (ರಿ) ಇದರ ಉದ್ಘಾಟನೆ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವಾರ್ಷಿಕ ಕಾರ್ಯಕ್ರಮದಡಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿರುಗುಪ್ಪ ತಾಲೂಕಿನ ಸಿರಿಗೇರಿಯ ಧಾತ್ರಿ ರಂಗಸಂಸ್ಥೆಯ ಕಲಾವಿದರಿಂದ ಉಪನ್ಯಾಸ ಮತ್ತು ವಚನ ಚಳುವಳಿ ಎಂಬ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಲಾವಿದರಾದ ಜಿಎಂ.ವಿಜಯ್, ತುಳಸಿಕರಿಗಾರ್, ಸುಮಿತ್ರ ಮಾನ್ವಿ, ರಮೇಶ ಕೊಪ್ಪಳ, ಕರಿಯಪ್ಪ ಕವಲೂರು, ಮಣಿ ಸಿರಿಗೇರಿ, ಸುನೀಲ್ ಕಲ್ಬುರ್ಗಿ, ಪ್ರಶಾಂತ್ ಗಂಗಾವತಿ, ಶಿವರಾಜ್ ತೋರಣಗಲ್ಲು, ಮಂಜು ಸಿರಿಗೇರಿ ಇವರು ನಾಟಕವನ್ನು ಅದ್ಭುತವಾಗಿ ಪ್ರದರ್ಶನ ಮಾಡಿದರು. ಇದೇವೇಳೆ ಟ್ರಸ್ಟ್‍ನ ಮುಖ್ಯಸ್ಥ ನರೇಶ್‍ಬಾಬು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು, ಇದಕ್ಕೆ ಗ್ರಾಮಸ್ಥರು ಪ್ರೋತ್ಸಾಹ ನೀಡಬೇಕು ಇದರಿಂದ ಹೆಚ್ಚು ಕಲಾವಿದರು ಬೆಳಕಿಗೆ ಬರುತ್ತಾರೆ ಮತ್ತು ಅವರಿಗೆ ಆಸರೆಯಾಗುತ್ತದೆ ಎಂದು ತಿಳಿಸಿದರು. ಗ್ರಾ.ಪಂ.ಅಧ್ಯಕ್ಷರಾದ ಗೋವಿಂದಪ್ಪ, ಸದಸ್ಯರಾದ ಗಾದಿಲಿಂಗಪ್ಪ, ಮಾಜಿ ಗ್ರಾ.ಪಂ.ಸದಸ್ಯರಾದ ಹಾಗಲೂರಪ್ಪ, ಧಾತ್ರಿ ರಂಗಸಂಸ್ಥೆಯ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
One attachment • Scanned by Gmail