ಕೋಳೂರು  ಏತ ನೀರಾವರಿ ಪುನಶ್ಚೇತನ ಯೋಜನೆಗೆ ಸಚಿವ ಶ್ರೀರಾಮುಲು‌ ಚಾಲನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.01: ತುಂಗಭದ್ರ ಬಲದಂಡೆ ಮೇಲ್ಮಟ್ಟದ ಡಿ.7 ಕಾಲುವೆ ವ್ಯಾಪ್ತಿಯ ಕೆಳಭಾಗದ ಜಿಲ್ಲೆಯ ಕುರುಗೋಡು ತಾಲೂಕಿನ ಸಿಂದಗೇರಿ, ಬೈಲೂರು, ಡಿ.ಕಗ್ಗಲ್ಲು, ಶಾನವಾಸಪುರ ಮತ್ತು ಕೊಂಚಿಗೇರಿಯ 3750 ಎಕರೆ  ಜಮೀನುಗಳಿಗೆ ನೀರು ಒದಗಿಸುವ 7.13 ಕೋಟಿ ರೂಗಳ ಕೋಳೂರು ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು‌ ಉದ್ಘಾಟನೆ ಮಾಡುದರು.
ನಂತರ ಮಾತನಾಡಿದ ಅವರು ಈ ಯೋಜನೆ ಮೊದಲೇ ಇತ್ತು ಆದರೆ ಪೈಪ್ ಗಳು ಸದಾ ಒಡೆದು ನೀರು ಸರಬರಾಜಿಗೆ ತೊಂದೇಯಾಗಿ ರೈತರು ಸಂಕಷ್ಟ. ಅನುಭವಿಸುವಂತಾಗುತ್ತಿತ್ತು. ಅದಕ್ಕಾಗಿ ಯೋಜನೆಯಲ್ಲಿ ಕಬ್ಬಿಣದ ಪೈಪ್ ಗಳ ಅಳವಡಿಕೆ, ವಾಲ್ವ್ ಗಳ ಅಳವಡಿಕೆ, ಹಳ್ಳಲದಲ್ಲಿ ನೀರು ಸಂಗ್ರಹಕ್ಕೆ ತಡೆಗೋಡೆ ನಿರ್ಮಾಣ ಮೊದಲಾದ ಪುನಶ್ಚೆತನ ಕಾಮಗಾರಿ ಕೈಗೊಂಡು ಇಂದು ರೈತರಗೆ ಅನುಕೂಲವಾಗಲು ನೀರೆತ್ತುವ ಕಾರ್ಯ ಆರಂಭಿಸಿದೆ.
ನಮ್ಮ‌ಬಿಜೆಪಿ ಸರ್ಕಾರ ಯಾವಾಗಲು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎಂಬುದಕ್ಕೆ ಇಈ ಯೋಜನೆ ಸಾಕ್ಷಿಯಾಗಿದೆ ಎಂದರು.
ಶಾಸಕ ಗಣೇಶ್  ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಲ ಸಂಪನ್ಮೂಲ ಸಚಿವರಾಗಿ ಈ ಯೋಜನೆಗೆ ಅನುದಾನ ನೀಡಿದ್ದವು. ಈಗ ಯೋಜನೆ ಪೂರ್ಣಗೊಂಡಿದೆ ಇದರಲ್ಲಿ ಬಿಜೆಪಿ ಸರ್ಕಾರದ ಸಾಧನೆ ಏನೂ ಇಲ್ಲ ಎಂದರು. 
ಮಾಜಿ ಸಂಸದೆ ಜೆ.ಶಾಂತಾ, ಬುಡಾ ಅಧ್ಯಕ್ಷ ಪಿ.ಪಾಲಣ್ಣ,  ಬಿಜೆಪಿ  ಮುಖಂಡ ಕೃಷ್ಣಮೂರ್ತಿ  ನೀರಾವರಿ ಇಲಾಖೆಯ
ಮುಖ್ಯ ಇಂಜಿನೀಯರ್, ಕೆ.ದುರ್ಗಪ್ಪ,  ಸೂಪರಿಂಟೆಂಡೆಂಟ್ ಎಲ್ ಬಸವರಾಜ್ , ಕಾರ್ಯನಿರ್ವಾಹಕ ಅಭಿಯಂತರರು ಸುರೇಶ್, ಕುರುಗೋಡು ಎಇಇ ಸುರೇಂದ್ರರೆಡ್ಡಿ, ಗುರುರಾಜ್, ಪ್ರಿಯದರ್ಶಿನಿ ಸಿಂದ್ಯಾ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಕೆ‌.ರಾಮಕೃಷ್ಣ ಮೊದಲಾದವರು ಇದ್ದರು.
 ಶಾಸಕರಿಗಾಗಿ  ಕಾದ ಸಚಿವರು:
ಸಚಿವ ಶ್ರೀರಾಮುಲು ಅವರೇನು ನಿಗಧಿತ ಸಮಯಕ್ಕೆ ಬಂದಿರಲಿಲ್ಲ. ಆದರೂ ಅವರು‌ ಬಂದರೂ, ಶಾಸಕ ಗಣೇಶ್ ಬಂದಿರಲಿಲ್ಲ.  ಸಚಿವರು ಕಾಯುತ್ತಿದ್ದರೂ ಶಾಸಕ ಗಣೇಶ್ ತಮ್ಮ ಬೆಂಬಲಿಗರು ಹಮ್ಮಿಕೊಂಡಿದ್ದ ಎತ್ತಿನ‌ಬಂಡಿಯಲ್ಲಿ‌ ಮೆರವಣಿಗೆ ಮಾಡಿಕೊಳ್ಳುತ್ತ, ಬೆಂಬಲಿಗರ ಹೆಗಲ ಮೇಲೆ ಕೂತು. ಅವರಿಂದ ಜಯ ಘೋಷಣೆಗಳನ್ನು ಕೂಗಿಸಿಕೊಳ್ಳುತ್ತ ಸಾಗಿ ಬಂದಿರು.
ನೂರಕ್ಕೂ ಹೆಚ್ಚು ಜನರಿಲ್ಲದಿದ್ದರೂ ಗಣೇಶನ ಅಭಿಮಾನಿಗಳು ನೂಕಾಟ, ತಳ್ಳಾಟ ಮಾಡಿದರು.ಇದರಿಂದ ಜಕಾವೆಲ್ ಉದ್ಘಾಟಿಸಿ ಬರುತ್ತಿದ್ದ ವೇಳೆ ಸಚಿವ ಶ್ರೀರಾಮುಲು ಅವರು ಕಾಲು ಉಳುಕಿತು. ಆದರೂ ಅವರು ಕುಂಟುತ್ತಲೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.