ಕೋಳೂರಿನ ಶಾಲಾ ಮಕ್ಕಳಿಗೆ ಸಸಿ ವಿತರಿಸಿದಸಂಚಾರಿ ಠಾಣೆ ಪೊಲೀಸ್ ಪೇದೆಗಳು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.19: ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಸಸಿ ವಿತರಿಸುವ ಕಾರ್ಯವನ್ನು
ನಗರದ ಸಂಚಾರಿ ಠಾಣೆಯ ಪೋಲಿಸ್ ಪೇದೆಗಳಾದ ವನ್ನಪ್ಪ ಮತ್ತು ವೀರಭದ್ರಪ್ಪ  ಮಾಡಿದ್ದಾರೆ.
ಇದೇ ಊರಿನವರು ಮತ್ತು ಇದೇ ಶಾಲೆಯಲ್ಲಿ ಓದಿದ್ದ ಇವರು ತಮ್ಮ ಜನ್ಮ ದಿನಕ್ಕಾಗಿ ಈ ಕಾರ್ಯ ಮಾಡಿದ್ದಾರೆ.
ಪೇದೆ ವನ್ನಪ್ಪ ಈ  ಸಂದರ್ಭದಲ್ಲಿ ಮಾತನಾಡಿ,  ಗಿಡ ಮರಗಳನ್ನು ನಾವೆಲ್ಲ ಸಂರಕ್ಷಿಸಬೇಕು. ಇಂದು ಸಸಿ ಪಡೆಯುವ ಮಕ್ಕಳು ಕಾಳಜಿಯಿಂದ  ಬೆಳೆಸಿ.  ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಅದರ್ಶ ವಿದ್ಯಾರ್ಥಿಗಳಾಗಿ ಎಂದು  ಹೇಳಿದರು.
ವೀರಭದ್ರ ಮಾತನಾಡಿ, ಪ್ರಕೃತಿ ನಮಗೆ ಎಲ್ಲಾವನ್ನು ನೀಡಿದೆ ಅದರೆ ಪ್ರಕೃತಿಗೆ ನಮ್ಮ ಕೊಡುಗೆ ಶೂನ್ಯ.  ಇದನ್ನರಿತು ನಾವುಗಳು ಸಾಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು
ಶಾಲೆಗೆ, ಗ್ರಾಮಕ್ಕೆ ಮಾದರಿ ವ್ಯಕ್ತಿಗಳಾಗಿ ಎಂದು ಮಕ್ಕಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎ.ಡಿ.ಎಂ.ಸಿ ಅದ್ಯಕ್ಷ,  ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿವರ್ಗ,  ಸಿದ್ದರಾಮ ಮತ್ತಿತರರು ಉಪಸ್ಥಿತರಿದ್ದರು.