ಕೋಳಿ, ಕಬ್ಬಲಿಗ, ಬೆಸ್ತ ಮತ್ತು ಇತರ ಪರ್ಯಾಯ ಪದಗಳನ್ನು Sಖಿ. ಪಟ್ಟಿಗೆ ಸೇರಿಸಿ : ಆಡಿ. ಯೋಗೇಶ್ ಬೆಸ್ತರ್

ಗುರಮಿಠಕಲ:ನ.11:ಬಹುದಿನಗಳ ಬೇಡಿಕೆಯಾಗಿದ್ದ ತಳವಾರ ಸಮಾಜದವರ Sಖಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎನ್ನುವ ಬೇಡಿಕೆಗೆ ಒಪ್ಪಿಗೆ ನೀಡಿ ಸರ್ಕಾರ ಆದೇಶಿಸಿದ್ದರು ಕೂಡ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳಿಂದ ಜಾತಿ ಪ್ರಮಾಣ ಪತ್ರಗಳನ್ನು ಪಡೆಯಲು ಕೆಲವಡೆ ಅಡ್ಡಿಪಡಿಸಲಾಗುತ್ತಿತ್ತು ಇಂದು ದೆಹಲಿಯಲ್ಲಿ ಆಡಿ. ಯೋಗೇಶ್ ಬೆಸ್ತರ್ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅಮರೇಶ್ ಕಾಮನಕೇರಿ ಯವರು ಜೊತೆಗೂಡಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಿ ಶ್ರೀ ಅರ್ಜುನ್ ಮುಂಡಾ ಅವರನ್ನು ಭೇಟಿ ಮಾಡಿ ಇನ್ನು ಮುಂದೆ ಯಾವುದೇ ಅಡೆತಡೆ ಇಲ್ಲದೆ ಜಾತಿ ಪ್ರಮಾಣ ಪತ್ರ ಕೊಡುಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಮತ್ತು ಸಂವಿದಾನದ ನಿಯಮ ಪ್ರಕಾರ ಫಾರಂ 1 ರಂತೆ Sಖಿ ಪ್ರಮಾಣ ಪತ್ರದಲ್ಲಿ ತಳವಾರ ಎಂದೇ ನಿಡಬೇಕು ಎಂದು ಸ್ಪಷ್ಟ ಸೂಚನೆ ನೀಡಲು ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಚಿವರು ಮುಖ್ಯ ಕಾರ್ಯದರ್ಶಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು
ಇದರ ಜೊತೆಗೆ ಟೋಕರೇ ಕೋಳಿ ಬಿಟ್ಟು ಹೋದ ಪರ್ಯಾಯ ಪದ, ಕೋಳಿ,ಕಬ್ಬಲಿಗ, ಕಬ್ಬೆರ, ಬೆಸ್ತ, ಅಂಬಿಗ, ಬಾರ್ಕಿ, ಬೋಯಿ ಪರ್ಯಾಯ ಪದಗಳನ್ನು ಕೂಡ Sಖಿ ಪಟ್ಟಿಗೆ ಸೇರಿಸಲು ಸೂಕ್ತ ದಾಖಲೆಗಳನ್ನು ನೀಡಿ ಮನವಿ ಮಾಡಲಾಯಿತು, ಮಾನ್ಯ ಮಂತ್ರಿಗಳು ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಈ ವಿಷಯವನ್ನು ಅತಿ ಶೀಘ್ರದಲ್ಲೇ ಬಗೆಹರಿಸಲು ಸೂಚಿಸಿದರು.
ಈ ಸಮಯದಲ್ಲಿ ಮಾತನಾಡಿದ ಆಡಿ. ಯೋಗೇಶ್ ಬೆಸ್ತರ್ ರವರು ಕೋಳಿ, ಕಬ್ಬಲಿಗ, ಬೆಸ್ತ ಮತ್ತು ಇತರ ಪದಗಳನ್ನು ಆದಷ್ಟು ಬೇಗ Sಖಿ ಪಟ್ಟಿಗೆ ಸೇರಿಸಲು ಸರ್ವ ರೀತಿಯಲ್ಲಿ ಪ್ರಯತ್ನಿಸಿ ಹಿಂದುಳಿದ ಜನಾಂಗದ ಜನರಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸಲು ತಾವು ಶ್ರಮಿಸುದ್ದೇವೆ ಎಂದು ತಿಳಿಸಿದರು.